ಫಲಾನುಭವಿಗಳಿಗೆ ಬೆಳೆ ವಿಮೆ ಪರಿಹಾರ ಕೊಡಿಸಿ

27mnv04
Published on

ಮಾನ್ವಿ: ಬೆಳೆ ವಿಮೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ವಿಮೆ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಿಬ್ಬಂದಿಗೆ ಮಾಡಗಿರಿ ಗ್ರಾಮದ ರೈತರು ಸೋಮವಾರ ರಾಯಚೂರಿನಲ್ಲಿ ಮನವಿ ಸಲ್ಲಿಸಿದರು.

ಮಾಡಗಿರಿ ಗ್ರಾಪಂ ಅಧ್ಯಕ್ಷ ಬಸ್ಸಯ್ಯಸ್ವಾಮಿ ಮಾತನಾಡಿ, ಗ್ರಾಮದ ಅನೇಕ ರೈತರು ಸಾಲ ಮಾಡಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭತ್ತದ ಫಸಲಿಗೆ ವಿಮೆ ಮಾಡಿಸಿದ್ದರು. ಬೆಳೆ ನಷ್ಟವಾಗಿರುವುದಕ್ಕೆ ಪರಿಹಾರ ಬಂದಿದೆ. ಆದರೆ, ಬೆಳೆ ವಿಮೆ ಪಾವತಿಸಿದ ರೈತರ ಬದಲಿಗೆ ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ ಮಾಡಲಾಗಿದೆ. ಬೆಳೆ ವಿಮೆ ಮಾಡಿಸಲು ಗ್ರಾಮ ಲೆಕ್ಕಾಧಿಕಾರಿಗೆ ಹಣ ನೀಡಿದ್ದ ನಮಗೆ ಪರಿಹಾರ ಬಂದಿಲ್ಲ. ಮಾಡಗಿರಿ ಗ್ರಾಮದಲ್ಲಿನ 25 ಕ್ಕೂ ಹೆಚ್ಚು ರೈತರ 1.25 ಕೋಟಿ ರೂ. ಹಣ ಬೇರೆಯವರ ಖಾತೆಗೆ ಹೋಗಿದೆ ಎಂದು ದೂರಿದರು. ರೈತರಾದ ಚಿನ್ನಪ್ಪ, ಅಮರೇಶ ಹಿರೇಗೌಡ್ರು, ಸಾಬುಗೌಡ, ಲವಕುಮಾರ, ಜಿಎಸ್ ನಾಯಕ, ಚನ್ನಪ್ಪಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net