ಕಾಡಾನೆ ದಾಳಿಗೆ ಬೆಳೆ ನಾಶ

2-kglphoto-4,
Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹಾಗೂ ಶಿವನಸಮುದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆ ಬೆಳೆ ತುಳಿದು, ತಿಂದು ನಾಶಪಡಿಸಿದೆ.


ಸತ್ತೇಗಾಲ ಗ್ರಾಮದ ಶಿವಣ್ಣ ಎಂಬುವವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತ ಹಾಗೂ ಈರುಳ್ಳಿ ಫಸಲನ್ನು ನಾಶಪಡಿಸಿರುವ ಕಾಡಾನೆ, ಶಿವನಸಮುದ್ರ ಗ್ರಾಮದ ಶಂಕರೇಗೌಡ ಎಂಬುವರ ಕಲ್ಲಂಗಡಿ, ಮಾವು, ತೆಂಗಿನ ಮರಗಳನ್ನು ನಾಶಪಡಿಸಿದೆ.


ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ತೊಂದರೆ ನೀಡುತ್ತಿದ್ದು, ನಿರಂತರವಾಗಿ ಬಂದು ನಮ್ಮ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದೆ. ಅರಣ್ಯ ಇಲಾಖೆಗೆ ತಿಳಿಸಿದರೂ ಆನೆಯನ್ನು ಕಾಡಿಗಟ್ಟಲು ಕ್ರಮವಹಿಸಿಲ್ಲ. ಇದೀಗ ಬೆಳೆ ನಾಶವಾಗಿರುವ ಕಾರಣ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.


=-=-=-=-=-=

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net