

ಗಂಗಾವತಿ: ಬೆಳೆ ಹಾನಿ ಸಮೀಕ್ಷೆಗಾಗಿ ಕಂದಾಯ ಅಧಿಕಾರಿಗಳ ತಂಡ ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಚರಿಸಿತು.
ಇದನ್ನೂ ಓದಿ: ಬೆಳೆಗಳಿಗೆ ಔಷಧ ಸಿಂಪಡಿಸಲು ದ್ರೋಣ್ ಮೊರೆ ಹೋದ ರೈತರು
ಮಳೆ ಬಾರದ ಹಿನ್ನೆಲೆಯಲ್ಲಿ ಮುಂಗಾರು ಕೃಷಿ ಹಿನ್ನಡೆಯಾಗಿದ್ದು, ಬರಗಾಲ ೋಷಿಸುವಂತೆ ರೈತ ಪರ ಸಂಘಟನೆಗಳು ಒತ್ತಾಯಿಸಿದ್ದವು. ಕೃಷಿ ಸ್ಥಿತಿಗತಿ ಕುರಿತು ವಾಸ್ತವ ವರದಿ ನೀಡುವಂತೆ ಸರ್ಕಾರದ ಆದೇಶ ಮೇರೆಗೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ಅಧಿಕಾರಿಗಳ ತಂಡ ವೆಂಕಟಗಿರಿ, ಬಂಡ್ರಾಳ್, ಗಡ್ಡಿ, ಆಗೋಲಿ, ಉಡುಮಕಲ್ ಸೇರಿ ವಿವಿಧೆಡೆ ಕೃಷಿ ಭೂಮಿಗೆ ತೆರಳಿ ಪರಿಶೀಲಿಸಿತು.
ಶೇ.33ರಷ್ಟು ಬೆಳೆ ಹಾನಿಯಾದ ಪ್ರದೇಶವನ್ನು ಬರಗಾಲ ಪೀಡಿತ ಎಂದು ೋಷಿಸಲು ಅವಕಾಶವಿದ್ದರಿಂದ ಪ್ರತಿಯೊಂದು ಬೆಳೆಯನ್ನು ವೀಕ್ಷಿಸಿತು. ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ, ಬತ್ತಿದ ಅಂತರ್ಜಲ ಮತ್ತು ತೇವಾಂಶ ಕೊರತೆಯಿಂದ ಶೇ.60ರಷ್ಟು ಬೆಳೆ ನಾಶವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ವಾಸ್ತವವರದಿಯನ್ನು ಆನ್‌ಲೈನ್ ಮೂಲಕವೇ ಸಂಗ್ರಹಿಸಿದ್ದು, ಬಹುತೇಕ ಬೆಳೆ ಕೈಕೊಟ್ಟಿವೆ. ಸೇಂಗಾ, ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ ಸೇರಿ ಏಕ ಮತ್ತು ದ್ವಿದಳ ಧಾನ್ಯಗಳ ಇಳುವರಿ ಬರುವ ಸಾಧ್ಯತೆಗಳಿಲ್ಲ ಎಂದರು. ಕಂದಾಯ ನಿರೀಕ್ಷಕ ಮಹೇಶ ದಲಾಲ್, ಗ್ರಾಮ ಆಡಳಿತಾಧಿಕಾರಿ ಅಮರೇಶ, ರಘುನಾಯಕ ಇದ್ದರು.