ಒಂಟಿಸಲಗ ದಾಳಿಗೆ ಕೃಷಿ ಹಾನಿ

Eliphent
Published on

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನೇರ್ತನೆ ಪರಿಸರದಲ್ಲಿ ನಾಲ್ಕು ದಿನಗಳಿಂದ ಕೃಷಿ ತೋಟಗಳಿಗೆ ಒಂಟಿಸಲಗ ದಾಳಿ ಇಡುತ್ತಿದ್ದು, ಕೃಷಿ ನಾಶಗೊಳಿಸುತ್ತಿದೆ.

ಇಲ್ಲಿನ ತಂಗಚ್ಚನ್, ಜೋನಾಥನ್, ಜೋಸೆಫ್ ಮೊದಲಾದವರ ತೋಟಗಳಿಗೆ ನುಗ್ಗಿದ ಸಲಗ 50 ಅಡಕೆಮರ, 15 ತೆಂಗಿನಮರ, 25ಕ್ಕಿಂತಲೂ ಅಧಿಕ ಬಾಳೆಗಿಡಗಳಿಗೆ ಹಾನಿಗೈದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿ, ರಾತ್ರಿ ಗಸ್ತು ಕಾಯುತ್ತಿದ್ದರೂ ಆನೆ ದಿನಕ್ಕೊಂದು ದಾರಿ ಮೂಲಕ ತೋಟಗಳಿಗೆ ನುಗ್ಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net