

ಮುಂಡರಗಿ: ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮಗಳ ರೈತರ ಜಮೀನುಗಳು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ ಬಸಿಯುವಿಕೆಯಿಂದಾಗಿ ಫಲವತ್ತಾದ ಭೂಮಿಗಳು ಸಂಪೂರ್ಣವಾಗಿ ಹಾಳಾಗಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಂಬಳ ಹಾಗೂ ಡೋಣಿ ಗ್ರಾಮದ ವಿವಿಧ ರೈತರ ಜಮೀನುಗಳು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಯಿಂದ ನೀರು ಬಸಿಯುತ್ತಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಶಾಶ್ವತವಾಗಿ ಪರಿಹಾರ ನೀಡಬೇಕು ಎಂದು ರೈತರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿ.ಸಿ. ‘ಸ್ಥಳ ಪರಿಶೀಲನೆ ಮಾಡಿ ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದರು.
ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್, ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ರಾಘವೇಂದ್ರ ಎಚ್.ಸಿ, ಎಇ ಬಸವರಾಜ ಗಡಾದ, ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಭಾಗಲಿ, ರೈತರಾದ ಮಂಜಯ್ಯಸ್ವಾಮಿ ಅರವಟಗಿಮಠ, ಪರಶುರಾಮ ಮುರುಡಿ, ಕೆ.ಜಿ. ಕಲ್ಲನಗೌಡ, ಶಾಂತಪ್ಪ ಬರಗಲ್ಲ, ಮಲ್ಲಪ್ಪ ಮಠದ, ರೇವಣಸಿದ್ದಪ್ಪ ಮಠದ, ಬಾಕ್ಷಿಸಾಬ್ ತಾಂಬೋಟಿ, ರಹಿಮನ್‌ಸಾಬ್ ತಾಂಬೋಟಿ, ನಾಗಪ್ಪ ಅಬ್ಬಿಗೇರಿ, ಲಕ್ಷ್ಮಣ ಮರಡಿ, ವಿರುಪಾಕ್ಷಯ್ಯ ಮುತ್ತಾಳಮಠ, ಅಬ್ದುಲರಜಾಕಸಾಬ್ ತಾಂಬೋಟಿ ಇತರರು ಇದ್ದರು.