

ಅಳವಂಡಿ: ಹೋಬಳಿಯ ಗ್ರಾಮಗಳಲ್ಲಿ ಮೇವು ಬ್ಯಾಂಕ್, ಗೋಶಾಲೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ರೈತರು ನಾಡ ಕಚೇರಿ ಕೇಸ್ ವರ್ಕರ್ ಶ್ರೀಕಾಂತಗೆ ಗುರುವಾರ ಮನವಿ ಸಲ್ಲಿಸಿದರು.
ಮಳೆ ಕೈಕೊಟ್ಟಿದ್ದರಿಂದ ಬೆಳೆ ತೇವಾಂಶದ ಕೊರತೆಯಿಂದ ಹಾಳಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಸರ್ಕಾರ ಗ್ರಾಮದಲ್ಲಿ ಮೇವು ಬ್ಯಾಂಕ್, ಗೋಶಾಲೆ ಸ್ಥಾಪಿಸಬೇಕು. ಕಳೆದ ವರ್ಷ ಸಂಗ್ರಹಿಸಿದ ಮೇವು ಖಾಲಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆ ನಾಶವಾಗಿದ್ದರಿಂದ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಿವಗ್ಯಾನಪ್ಪ ನೀಲಿಹಿಂಡರ, ನಿಂಗರಾಜ ಜಂತ್ಲಿ, ಬಸವರಾಜ ನೀಲೋಗಿಪುರ, ಗುಡದೀರಪ್ಪ, ಮಂಜುನಾಥ, ವೆಂಕಟೇಶ ಬಂಡಿ, ರಾಮಣ್ಣ ವಾಲಿಕಾರ, ರೇಣುಕರಾಜ ಅಡವಳ್ಳಿ, ರಾಮಣ್ಣ ತಳಕಲ್, ಶಿವನಗೌಡ ಪೋಲಿಸ್ ಪಾಟೀಲ್, ಬಸವರಾಜ, ನಿಂಗಪ್ಪ, ಹನುಮಂತ ಇದ್ದರು.