ಅರಣ್ಯ ಸಚಿವರನ್ನು ಭೇಟಿ ಮಾಡಲು ಬಂದ ಮೊಸಳೆ ಸೆರೆ..!

Anand Sing
Published on

ಬಳ್ಳಾರಿ: ಅರಣ್ಯ ಸಚಿವ ಆನಂದ್​ ಸಿಂಗ್​ರನ್ನು ಭೇಟಿಯಾಗಲು ಬಂದ ಮೊಸಳೆಯೊಂದು ಸೆರೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೀಗೆಂದು ನಾವು ಹೇಳುತ್ತಿಲ್ಲ. ಬಳ್ಳಾರಿಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು, ಇದು ಒಂದು ರೀತಿಯಲ್ಲಿ ತಮಾಷೆ ಅನ್ನಿಸಬಹುದು, ಆದರೆ, ಕಾಕತಾಳಿಯವೆಂಬಂತೆ ಹೊಸಪೇಟೆಯಲ್ಲಿರುವ ಆನಂದ ಸಿಂಗ್ ಅವರ ಬೃಹತ್ ಬಂಗಲೆ ಮುಂದೆಯೇ ಮೊಸಳೆ ಪ್ರತ್ಯಕ್ಷವಾಗಿದೆ.

ಆನಂದ್ ಸಿಂಗ್ ಮನೆಯ ಮುಂದೆ ಹೆಚ್​ಎಲ್​ಸಿ ಕಾಲುವೆ ಇದೆ. ತಡರಾತ್ರಿ ಕಾಲುವೆಯಿಂದ ಮೊಸಳೆಯು ಮನೆಯ ಮುಂಭಾಗದ ರಸ್ತೆ ಮೇಲೆ ಬಂದಿದೆ. ಇನ್ನೂ ಮೂರು ಮೊಸಳೆ ಕಾಲುವೆಯಲ್ಲಿ ಇದ್ದು, ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.

ಸದ್ಯ ರಸ್ತೆಯ ಮೇಲೆ ಬಂದ ಮೊಸಳೆಯನ್ನು ಅರಣ್ಯ ಇಲಾಖೆ ಹಿಡಿದುಕೊಂಡು ಹೋಗಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ. ಈ ವಿಚಾರ ತಿಳಿದ ಅನೇಕರು ಎಲ್ಲೋ ಮೊಸಳೆ ಅರಣ್ಯ ಸಚಿವರ ಬಳಿ ತನ್ನ ಕಷ್ಟ ಹೇಳಿಕೊಳ್ಳೋಕೆ ಬಂದಿತ್ತೇನೋ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net