ಬಾಯಿಗೆ ಹಗ್ಗ ಕಟ್ಟಿರೋ ಸ್ಥಿತಿಯಲ್ಲಿ ಮೊಸಳೆ‌ ಪತ್ತೆ: ಆಹಾರ ಸೇವಿಸಲಾಗದೇ ನದಿಯಿಂದ ರಸ್ತೆಗೆ ಎಂಟ್ರಿ

Crocodile
ವಿಜಯಪುರ ಹೆದ್ದಾರಿಯಲ್ಲಿ ಮೊಸಳೆ
Published on

ವಿಜಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಸಳೆಯೊಂದು ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಲ್ಹಾರ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 218ರ ಮೇಲೆ ಶನಿವಾರ ಮೊಸಳೆ ಕಾಣಿಸಿಕೊಂಡಿದ್ದು, ಬಾಯಿಗಿ ಬಿಗಿಯಾಗಿ ಹಗ್ಗ ಕಟ್ಟಲ್ಪಟ್ಟಿದೆ.

ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆ ಬಳಿ ಕಂಡು ಬಂದ ಮೊಸಳೆ ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ‌. ಯಾವುದೋ ಜನವಸತಿಗೆ ನುಗ್ಗಿದ ಮೊಸಳೆಯ ಬಾಯಿಗೆ ಹಗ್ಗ ಕಟ್ಟಿ ಕೃಷ್ಣಾ ನದಿ ಬಳಿ ಬಿಟ್ಟಿರುವ ಸಾಧ್ಯತೆ ಇದೆ.

ಬಾಯಿಗೆ ಹಗ್ಗ ಕಟ್ಟಿರೋ ಕಾರಣ ಆಹಾರ ಸೇವಿಸಲು ಆಗದೇ ನದಿಯಾಚೆ ಹೊರ ಬಂದಿರುವ ಮೊಸಳೆಯನ್ನು ರಕ್ಷಿಸಲು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net