ಮೈಸೂರಿನಲ್ಲಿ ಕೊನೆಗೂ ಸೆರೆಸಿಕ್ಕ ಮೊಸಳೆ

Crocodile finally captured in Mysore
Published on

ಮೈಸೂರು: ನಗರದ ಎಲೆತೋಟದ ನಿವಾಸಿಗಳ ನೆಮ್ಮದಿ ಕೆಡಿಸಿದ್ದ ಬೃಹತ್ ಗಾತ್ರದ ಮೊಸಳೆಯನ್ನು ಗುರುವಾರ ಸೆರೆ ಹಿಡಿಯಲಾಗಿದ್ದು, ಸ್ಥಳೀಯ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚಾಮುಂಡಿಪುರಂನಿಂದ ಊಟಿ ರಸ್ತೆಗೆ ತೆರಳುವ ಮಾರ್ಗದ (ಎಲೆತೋಟ) ರಾಜಾ ಕಾಲುವೆಯಲ್ಲಿ ಅ.15 ರಂದು ಮೊಸಳೆ ಕಾಣಿಸಿಕೊಂಡಿತ್ತು. ಆ ಸಂದರ್ಭ ಧಾರಾಕಾರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಾಜಾ ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತಿತ್ತು. ಹಾಗಾಗಿ ಬೆಳಗ್ಗಿನಿಂದ ಸಂಜೆವರೆಗೂ ಮೊಸಳೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದರೂ ಮೊಸಳೆ ಸೆರೆ ಸಿಗಲಿಲ್ಲ.

ಅದಾದ ನಂತರ ನ.13 ರಂದು ರಾಮಾನುಜ ರಸ್ತೆಯ 9ನೇ ಕ್ರಾಸ್‌ನ (ಎಲೆತೋಟ) ರಾಜಾಕಾಲುವೆಯ ಬಳಿ ಮೊಸಳೆಯು ಕರುವೊಂದನ್ನು ಬಲಿ ಪಡೆದಾಗ ಮೊಸಳೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ನಂತರ ಅರಣ್ಯ ಇಲಾಖೆ, ನಗರ ಪಾಲಿಕೆ ಹಾಗೂ ಮೈಸೂರು ಮೃಗಾಲಯ ಸಿಬ್ಬಂದಿ ಮೊಸಳೆ ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿದರೂ ಮೊಸಳೆ ಸೆರೆ ಸಿಗಲಿಲ್ಲ. ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net