ಕಾಲೇಜಿಗೆ ಬಂದ ಮೊಸಳೆಯನ್ನು ನೋಡಿ ಭಯಭೀತರಾದ ವಿದ್ಯಾರ್ಥಿಗಳು; ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು

Crocodile 20 Feb 20
Published on

ಧಾರವಾಡ: ಕಾಲೇಜು ಆವರಣದಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ಆಳ್ನಾವರ ಪಟ್ಟಣದಲ್ಲಿ ನಡೆದಿದೆ.

ಮೊಸಳೆಗಳೆಲ್ಲ ಸಾಮಾನ್ಯವಾಗಿ ನದಿ ತೀರದಲ್ಲಿ ಇರುತ್ತವೆ. ಆದರೆ ಆಳ್ನಾವರ-ಕಾಶೆನಟ್ಟಿ ಮಾರ್ಗದಲ್ಲಿರುವ ಸೇಂಟ್​ ಥೆರೆಸಾ ಕಾಲೇಜಿಗೆ ಮೊಸಳೆಯೊಂದು ಬಂದಿತ್ತು. ಅದನ್ನು ನೋಡಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರೆಲ್ಲ ಭಯಭೀತರಾಗಿದ್ದಾರೆ.

ಆಡಳಿತ ಮಂಡಳಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ. ಸಾರ್ವಜನಿಕರ ಸಹಾಯದಿಂದ ಅದನ್ನು ಸೆರೆಹಿಡಿಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net