ಕೃಷಿ ಹೊಂಡದಲ್ಲಿ ಮೊಸಳೆ ಸೆರೆ

Published on

ಬಳ್ಳಾರಿ ; ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಗ್ರಾಮದ ವೆಂಕೋಬಿಯ ಕೃಷಿಹೊಂಡದಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಸೆರೆ ಹಿಡಿದಿದ್ದಾರೆ.

ಸದ್ಯ ಸಿಕ್ಕಿರುವ ಮೊಸಳೆಯು 4.5 ಅಡಿ ಉದ್ದವಿದ್ದು, ಅಂದಾಜು 25 ವರ್ಷ ವಯಸ್ಸಿಯಿದ್ದು, 20 ಕೆ.ಜಿ. ತೂಕವಿದೆ. ಗ್ರಾಮದ ಸಮೀಪದ ತುಂಗಾಭದ್ರ ಜಲಾಶಯದ ಹೊಳೆ ಹರಿಯುತ್ತಿದ್ದು ಅಲ್ಲಿಂದ ಇಲ್ಲಿಗೆ ಬಂದಿರಬಹುದು. ಕಳೆದ ನಾಲ್ಕೈದು ವರ್ಷಗಳಿಂದ ಕೃಷಿ ಹೊಂಡಕ್ಕೆ ಸೇರಿರುವ ಸಾಧ್ಯತೆಯಿದೆ. ಸದ್ಯ ಸೆರೆ ಹಿಡಿದಿರುವ ಮೊಸಳೆಯನ್ನು ತುಂಗಭದ್ರ ಜಲಾಶಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net