

ಬೆಳಗಾವಿ: ಇಲ್ಲಿನ ಅಶೋಕ ನಗರದ ಹೂವಿನ ಮಾರ್ಕೆಟ್ ಬಳಿ ಅನಧಿಕೃತ ವಾಗಿ ಹೆರಾಯಿನ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸಚನಗಲ್ಲಿಯ ಬಾಗೇಶ ನಂದಾಳಕರ ಬಂಧಿತ ವ್ಯಕ್ತಿ.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆರಾಯಿನ್ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಹಚ್ಚಿರುವ ಪೊಲೀಸರು ಬಂಧಿತನದಿಂದ 1.06 ಲಕ್ಷ ರೂ. ಮೌಲ್ಯದ 36.16ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇಸಿಬಿ ಪಿಐ ನಂದಿಶ್ವರ್ ಕುಂಬಾರ್ ನೇತೃತ್ವದಲ್ಲಿ ಎಚ್ ಸಿ ಎಸ್ ಬಿ ಪಾಟೀಲ್, ಪಿಸಿ ಎ ಎನ್ ರಾಮಗೊನಟ್ಟಿ ಹಾಗೂ ಪಿ ಸಿ ಮಹೇಶ್ ಪಾಟೀಲ್, ಕೂಡಿ ದಾಳಿ ನಡೆಸಿದ್ದಾರೆ.