ಬೆಳಗಾವಿಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

IMG-20240523-WA0055.jpg
Published on

ಬೆಳಗಾವಿ: ಕ್ರಿಕೆಟ್ ಆಟವಾಡುತ್ತಿದ್ದ ಹುಡುಗರ ಮಧ್ಯ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ಹಾಗೂ ಕಲ್ಲು ತೂರಾಟ ನಡೆದ ಘಟನೆ ನಗರದ ಶಹಪೂರ ಪ್ರದೇಶದ ಅಳ್ವಾನ ಗಲ್ಲಿಯಲ್ಲಿ ಗುರುವಾರ ನಡೆದಿದೆ.
ಗಲ್ಲಿ ಕ್ರಿಕೆಟ್ ಆಡುವಾಗ‌ ಮಕ್ಕಳ ನಡುವೆ ನಡೆದ  ಜಗಳ ವಿಕೋಪಕ್ಕೆ ತೆರಳಿ ಎರಡೂ ಗುಂಪುಗಳ ನಡುವೆ ಮಾರಾಮಾರಿ ನಡೆದು, ಕಲ್ಲು ತೂರಾಟ ನಡೆದ ಘಟನೆ  ನಡೆದಿದೆ.
ಗಲ್ಲಿ ಕ್ರಿಕೆಟ್ ನಲ್ಲಿ ಮಕ್ಕಳ ನಡುವಿನ  ಜಗಳ ವಿಷಯ ದೊಡ್ಡವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೈ ಕೈಮೀಲಾಸುವ ಹಂತಕ್ಕೆ ಹೋಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗಲಾಟೆಯಲ್ಲಿ ಎಂಟು ಜನರಿಗೆ ಗಾಯಗೊಂಡಿದ್ದಾರೆ.  ಅಲ್ಲದೆ ಕೈಯಲ್ಲಿ ತಲ್ವಾರ ಹಿಡಿದು ಓಡಾಟ ಮಾಡಲಾಗಿದೆ ಎಂದು ಸ್ಥಳಿಯರಲ್ಲಿ ಚರ್ಚೆ ನಡೆದಿದೆ. ಈ ಕುರಿತು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.
ಈ ಕುರಿತು ಶಹಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನೂ ಸ್ಥಳೀಯರು ಪೊಲೀಸ ಠಾಣೆಯ ಮುಂದೆ ಜಮಾಯಿಸಿ ಪರಸ್ಪರ ಆರೋಪ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಜನರನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಮಾರ್ಟಿನ ಅವರು,
ಕ್ರಿಕೆಟ್ ಆಡುವಾಗ ಸಣ್ಣ ಗಲಾಟೆ ಆಗಿದೆ. ಅದಾದ ಬಳಿಕ ಎಲ್ಲರೂ ಮನೆಗೆ ತೆರಳಿದ್ದಾರೆ. ಇದಾದ ಬಳಿಕ ಸ್ವಲ್ಪ ಜಗಳ ಆಗಿದೆ. ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿ ಕಾನೂನು ಸುವ್ಯವಸ್ಥೆ ಹತೋಟಿಗೆ ತಂದಿದ್ದಾರೆ. ಈಗ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಈಗ ದೂರ ದಾಖಲಾಗುತ್ತಿದೆ. ನಮ್ಮ ತನಿಖೆಯಲ್ಲಿ ಸಿಸಿ ಟಿವಿ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದೆ. ಅದನ್ನು ನಾವು ನಿಭಾಯಿಸುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net