ಸಹಾಯ ಮಾಡಿದವರನ್ನು ಎಚ್‌ಡಿಕೆ ಎಂದಿಗೂ ನೆನೆಯಲ್ಲ: ಸಚಿವ ಎನ್.ಚಲುವರಾಯಸ್ವಾಮಿ ಟೀಕೆ

HDK Chaluvarayaswamy
Published on

ಮಂಡ್ಯ: ಎಚ್‌ಡಿಕೆ ಎಲ್ಲರನ್ನೂ ಟೀಕಿಸುತ್ತಿದ್ದಾರೆ. ನಾವು ಅವರು ಜತೆಯಲ್ಲಿಯೇ ಇದ್ದವರು. ಸಹಾಯ, ಬೆಂಬಲ ಮಾಡಿದವರನ್ನೇ ಒಂದು ಹೆಜ್ಜೆ ಮುಂದೆ ಹೋಗಿ ಮರೆಯುತ್ತಾರೆ. ಸಹಾಯ ಮಾಡಿದವರನ್ನ ನೆನೆಯುವಂತದ್ದನ್ನ ನಾನು ನೋಡಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಡಿಕೆ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿಆರ್‌ಎಸ್, ಫಾಸ್ಟ್ ಇಸ್ ಫಾಸ್ಟ್. ನಾವು ಅವರಂತೆ ವಿಚಾರ ಸಿಕ್ಕಿದರೆ ಎಳೆಯಲ್ಲ. ಅದನ್ನ ಬಿಟ್ಟು ಮುಂದೆ ಹೋಗೋಣಾ. ಗೃಹಜ್ಯೋತಿ ಯೋಜನೆ ಬಗ್ಗೆ ಎಚ್‌ಡಿಕೆ ಮಾಡುತ್ತಾರೆ. ನಾವು ಒಬ್ಬ ಮನುಷ್ಯನನ್ನು ಗೌರವಿಸಬೇಕು, ಪ್ರೀತಿಸಬೇಕು. ಆದರೆ ಅವರು ನಮ್ಮನ್ನ ಪ್ರೀತಿಸಬೇಕು, ಗೌರವಿಸಬೇಕು ಎಂದು ಕಾನೂನಿದೆಯೇ. ಒಬ್ಬರನ್ನ ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿ ಎಂದು ಟೀಕಿಸಿದರು.

ವಿದ್ಯುತ್ ಸರಬರಾಜು ವಿಚಾರದಲ್ಲಿ ತಪ್ಪಾಗಿದೆ. ಆದರೆ ನಾನು ರೈತರ ಭೂಮಿ ಕಬಳಿಸಿಲ್ಲ ಎಂದು ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಭೂಮಿ ಕಬಳಿಸಿರುವವರು. ವೈಟ್ ಪೇಪರ್ ಡಿಕ್ಲೇರ್ ಮಾಡಲಿ ಬಿಡಿ. ಒಬ್ಬ ಮನುಷ್ಯ ಆಸ್ತಿ ಮಾಡುವುದಕ್ಕೆ ಇತಿಮಿತಿ ಇರುತ್ತದೆ. ರಾಜಕೀಯವಾಗಿ ಬಂದ ಕುಟುಂಬ ಎಷ್ಟು ಆಸ್ತಿ ಮಾಡಿದೆ ಎಂದು ತನಿಖೆ ಆಗಲಿ. ಕೇಂದ್ರ ಸರ್ಕಾರದೊಂದಿಗೆ ಎಚ್ಡಿಕೆ ಇದ್ದು, ಅವರೇ ತನಿಖೆ ಮಾಡಿಸಲಿ. ಎಲ್ಲ ಪಕ್ಷದ ಪ್ರಮುಖ ರಾಜಕಾರಣಿಗಳ ಮೇಲೆ ತನಿಖೆ ಆಗಲಿ. ಯಾರ‌್ಯಾರು ಎಷ್ಟು ಆಸ್ತಿ ಮಾಡಿದ್ದಾರೆಂದು ಕುಮಾರಸ್ವಾಮಿಯಿಂದಲೇ ಜನರಿಗೆ ಗೊತ್ತಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net