ಕೊಟ್ಟ ಭರವಸೆಗಳನ್ನೆಲ್ಲ ಎಚ್‌ಡಿಕೆ ಈಡೇರಿಸಿದ್ರಾ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

Minister N.Cheluvarayaswamy
Published on

ಮಂಡ್ಯ: ಕುಮಾರಸ್ವಾಮಿ 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟಿದ್ದ ಎಲ್ಲ ಭರವಸೆ ಈಡೇರಿಸಿದ್ದಾರಾ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಕೇಳಿ ನಾವು ಕೊಡುವ ಅವಶ್ಯಕತೆ ಇಲ್ಲ. ನಾವು ಹೇಳಿದ ಭರವಸೆ ಈಡೇರಿಸುತ್ತೇವೆ. ಬಿಜೆಪಿ ಮತ್ತು ಜೆಡಿಎಸ್ ನೀಡಿದ್ದನ್ನು ನಾವು ಈಡೇರಿಸುವುದಕ್ಕೆ ಆಗುವುದಿಲ್ಲ. ಸಧ್ಯ ಮೋಡ ಬಿತ್ತನೆ ಮಾಡುವ ಆಲೋಚನೆ ನಮ್ಮ ಮುಂದೆ ಇಲ್ಲ. ಹಿಂದೆ ಎರಡು ಮೂರು ಸಲ ಮೋಡ ಬಿತ್ತನೆ ಮಾಡಿದರೂ ಫಲ ನೀಡಿಲ್ಲ. ಈಗಾಗಲೇ ಬರ ಅಧ್ಯಯನ ಮಾಡುತ್ತಿದ್ದೇವೆ. ಎಷ್ಟು ತಾಲೂಕಿನಲ್ಲಿ ಸಮಸ್ಯೆ ಆಗಿದೆ ಎನ್ನುವುದನ್ನು ನೋಡುತ್ತಾ ಇದ್ದೇವೆ. ಸೆ.2ಕ್ಕೆ ಯಾವ ತಾಲೂಕು ಬರಪ್ರದೇಶ ಎಂದು ಘೋಷಣೆ ಮಾಡುತ್ತೇವೆ ಎಂದರು.

ರಾಜ್ಯಪಾಲಕರಿಗೆ ಪತ್ರ ಬರೆದಿದ್ದ ಪ್ರಕರಣದ ಸಿಐಡಿ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ಇನ್ನೂ ಸಿಐಡಿ ವರದಿ ಬಂದಿಲ್ಲ. ತನಿಖೆ ಆಗುತ್ತಿದೆ ಎಂದು ಹೇಳಿದ್ದಾರೆ. ಜೆಡಿಎಸ್‌ನವರು ಏಳು ಜನ ಗೆದ್ದಿದ್ದಾಗ ನೆಮ್ಮದಿ ಆಗಿ ಇದ್ದೇವು ಎಂಬ ಅಂಶವಿದೆ. ಆ ವಿಚಾರ ಸುಳ್ಳು ಇರಬೇಕು. ಆದ್ದರಿಂದ ಅದರ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ ಹೇಳುತ್ತಾರೆ. ನಾನು ಯಾವಾಗಲೂ ಸತ್ಯ ಹೇಳುತ್ತೇನೆಂದು ಅವರೇ ಹೇಳುತ್ತಾರೆ. ಆದ್ದರಿಂದ ಯಾರು ಪತ್ರ ಬಗ್ಗೆ ಅವರೇ ಹೇಳುತ್ತಾರೆ. ಅವರು ನನ್ನ ಹೆಸರು ಹೇಳದೇ ಇದ್ದರೆ ನಿದ್ರೆ ಬರಲ್ಲ ಎಂದಿದ್ದಾರೆ. ಆದರೆ ಎಚ್‌ಡಿಕೆಗೆ ನನ್ನ ಹೆಸರು ಹೇಳದೆ ಇದ್ದರೆ ನಿದ್ರೆ ಬರಲ್ಲ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net