ವಿಮರ್ಶಾ ಕೃತಿ ಆಹ್ವಾನ

111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾಹಿತಿ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಸ್ಮರಣಾರ್ಥ ಅವರ ಹೆಸರಿನಲ್ಲಿ ನೀಡುವ ಸ್ವತಂತ್ರ ವಿಮರ್ಶಾ ಪ್ರಶಸ್ತಿ ನೀಡಲು ಡಾ. ಗಿರಡ್ಡಿ ಗೋವಿಂದರಾಜಫೌಂಡೇಷನ್‌ನಿ0ದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. 2024ರ ಜ. 1ರಿಂದ ಡಿ. 31ರೊಳಗೆ ಮುದ್ರಣಗೊಂಡಿರುವ ಕನ್ನಡದ ವಿಮರ್ಶಾ ಕೃತಿಯಾಗಿರಬೇಕು. ಪ್ರಶಸ್ತಿ 25,000 ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಆಸಕ್ತರು 4 ಪ್ರತಿಗಳನ್ನು ಆ. 10ರೊಳಗೆ ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಕೇರ್ ಆಫ್ ಹಿರೇಮಲ್ಲೂರ ಈಶ್ವರನ್ ಪಿಯು ಕಾಲೇಜ್, ಕಲ್ಯಾಣನಗರ ಧಾರವಾಡ- 580007 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಫೌಂಡೇಷನ್ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net