ಸಾಂಸ್ಕೃತಿಕ ಸಂದರ್ಭಕ್ಕೆ ಹೊಂದಿಕೊಳ್ಳದಿದ್ದರೆ ಬಿಕ್ಕಟ್ಟು

ylp sahitya
Published on

ಯಲ್ಲಾಪುರ: ಸಾಹಿತ್ಯಕ್ಕೂ ಮತ್ತು ಸಂಸಾರಕ್ಕೂ ಅವಿನಾಭಾವ ಸಂಬಂಧ ಇದೆ. ಸಾಹಿತ್ಯ ಮತ್ತು ಕೃಷಿ ಬೇರೆ ಅಲ್ಲ ಎಂದು ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.

ತಾಲೂಕಿನ ಬೀಗಾರಿನ ಕಲ್ಮನೆಯಲ್ಲಿ ಶಿವರಾಮ ಗಾಂವ್ಕರ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಸಾಹಿತ್ಯ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೂಪಾಂತರವಾಗದೇ ಜೀವ ವಿಕಾಸ ಆಗದು. ಬದಲಾದ ಸಾಂಸ್ಕೃತಿಕ ಸಂದರ್ಭಕ್ಕೆ ನಮ್ಮನ್ನು ನಾವು ಹೊಂದಿಸಿಕೊಳ್ಳಲಾಗದಿದ್ದರೆ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದರು.

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿ ಇರಲು ಹೊಸ ಹೊಳಹು ನೀಡಬೇಕು. ನಮ್ಮ ಸಾಮಾಜಿಕ ಚಿಂತನೆ ಭವಿಷ್ಯದ ಚಿಂತನೆಗೆ ಪೂರಕವಾಗಬೇಕು ಎಂದರು.

ಪತ್ರಕರ್ತ ಹರಿಪ್ರಕಾಶ ಕೋಣೆಮನೆಯವರ ಕೃತಿಗಳ ಕುರಿತು ಪತ್ರಕರ್ತರಾದ ವಿ.ಜಿ. ಗಾಂವ್ಕರ, ದತ್ತಾತ್ರೇಯ ಭಟ್ಟ ಕಣ್ಣಿಪಾಲ, ಚಿಂತಕರಾದ ಗಣಪತಿ ಮೆಣಸುಮನೆ, ನಾರಾಯಣ ಹೆಗಡೆ, ಡಾ. ಡಿ.ಕೆ. ಗಾಂವ್ಕರ ಅವಲೋಕನ ನಡೆಸಿದರು.

ಯಕ್ಷಗಾನ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಎಸ್.ಎನ್. ಗಾಂವ್ಕರ್ ಬೆಳ್ಳಿಪಾಲ, ಗಣಪತಿ ಮಾನಿಗದ್ದೆ, ಇತರರಿದ್ದರು.

ಭೂಮಿಕಾ ಭಟ್ಟ ಪ್ರಾರ್ಥಿಸಿದರು. ಉಪನ್ಯಾಸಕ ಜಿ.ಕೆ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಗಾಂವ್ಕರ, ವಿನಯಶ್ರೀ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net