ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

Bachakhan
ಠಾಣೆ ಮೆಟ್ಟಿಲೇರುತ್ತಿರುವ ಆರೋಪಿ
Published on

ಧಾರವಾಡ: ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಪಾತಕಿಯೊಬ್ಬ ನಡುವೆ ಸಿಕ್ಕ ಸ್ವಲ್ಪ ಸಮಯದಲ್ಲೇ ಲಾಡ್ಜ್​​ವೊಂದರಲ್ಲಿ ಪ್ರೇಯಸಿಯೊಂದಿಗೆ ಸರಸಕ್ಕಿಳಿದು, ಸಿಕ್ಕಿಬಿದ್ದಿದ್ದಾನೆ. ಭೂಗತವಾಗಿದ್ದ ಪಾತಕಿ ಬಚ್ಚಾಖಾನ್​ ಪ್ರೇಯಸಿಯೊಂದಿಗೆ ಸರಸದಲ್ಲಿದ್ದಾಗಲೇ ಸಿಕ್ಕಿಹಾಕಿಕೊಂಡಿದ್ದಾನೆ.

ಈತನನ್ನು ಇಂದು ಬಳ್ಳಾರಿ ಜೈಲಿನಿಂದ ಧಾರಾವಾಡದ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ ಈ ನಡುವೆ ಈತನಿಗೆ ಪ್ರೇಯಸಿಯ ಜತೆ ಕಾಲಕಳೆಯಲು ಕೆಲವು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಾಯಾಪುರದ ಬಳಿಯ ಪೃಕೃತಿ ಲಾಡ್ಜ್‌‌ನಲ್ಲಿ ಈತನಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಈತನ ಪ್ರೇಯಸಿ ಮೊದಲೇ ಬಂದು ಕಾಯುತ್ತಿದ್ದಳು. ನಂತರ ಇಬ್ಬರೂ ಸರಸಕ್ಕಿಳಿದಿದ್ದರು.

ಬಚ್ಚಾಖಾನ್ ತನ್ನ ಪ್ರೇಯಸಿಯೊಂದಿಗೆ ಲಾಡ್ಜ್​​ನಲ್ಲಿ ಸರಸದಲ್ಲಿ ಇರುವುದನ್ನು ತಿಳಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಲಾಡ್ಜ್​ ಮೇಲೆ ದಾಳಿ ಮಾಡಿದ್ದು, ಬಚ್ಚಾಖಾನ್​ನನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಿದ್ಯಾಗಿರಿ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net