ಅಪರಾಧ ತಡೆ ಮಾಸಾಚರಣೆ

Crime Prevention Month Celebration
ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸಲಾಯಿತು. ಪಿಎಸ್‌ಐ ಗಳಾದ ಕಿರಣ ಸತ್ತಿಗೇರಿ, ಮಧು ಎಲ್., ವೈ.ವೈ ಗಚ್ಚನ್ನವರ ಇದ್ದರು.
Published on

ಮಹಾಲಿಂಗಪುರ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಮತ್ತು ಸ್ಥಳೀಯ ಪೋಲೀಸ್ ಠಾಣೆ ಸಹಯೋಗದಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ಆಟೋ ಚಾಲಕರು ಮತ್ತು ಸಾರ್ವಜನಿಕರಲ್ಲಿ ಅಪರಾಧ ಪ್ರಕರಣಗಳ ಕಡಿವಾಣ ಕುರಿತು ಅರಿವು ಮೂಡಿಸಲಾಯಿತು.

ಪಿಎಸ್‌ಐ ಮಧು. ಎಲ್ ಮಾತನಾಡಿ, ಅಪರಾಧ ನಡೆದ ಸಂದರ್ಭದಲ್ಲಿ ಜನ ಧೈರ್ಯವಾಗಿ ಪೊಲೀಸ್ ಇಲಾಖೆ ಮುಂದೆ ಆರೋಪಿಯ ಬಗ್ಗೆ ವಾಸ್ತವ ನುಡಿಯಬೇಕು. ಇಲ್ಲವಾದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಪರಾಧಿಗಳು ಶಿಕ್ಷೆಯಿಂದ ಬಚಾವ್ ಆಗಿ ಸಮಾಜಕ್ಕೆ ಕಂಟಕ ಪ್ರಾಯರಾಗುತ್ತಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದರು.

ಅಪರಾಧ ಕೃತ್ಯ ಜರುಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ. ಪೊಲೀಸ್ ಇಲಾಖೆಯೇ ಎಲ್ಲವನ್ನೂ ನಿಭಾಯಿಸಲಾಗದು, ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಹೇಳಿದರು.

ವೈ.ವೈ.ಗಚ್ಚನ್ನವರ, ಮಲ್ಲೇಶ ಲಮಾಣಿ, ಭೀಮಶಿ ಹಡಪದ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net