ಹಾರ್ಡ್ವಿಕ್ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ

police
Published on

ಮೈಸೂರು: ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಹಾರ್ಡ್ವಿಕ್ ಶಾಲಾ ಆವರಣದಲ್ಲಿ ಅಪರಾಧ ತಡೆ ಮಾಸಚಾರಣೆ 2021-22 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಸ್‌ಡಿಎಂ ಶಾಲೆ, ಹಾರ್ಡ್ವಿಕ್ ಸ್ಕೂಲ್, ಜೆಎಸ್‌ಎಸ್ ಸ್ಕೂಲ್ ಹಾಗೂ ಜಗದಾಂಬ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಮಕ್ಕಳಿಗೆ ಸುರಕ್ಷಾ ಸಲಹೆಗಳನ್ನು ನೀಡಲಾಯಿತು.


‘ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡಬೇಕು. ಯಾರಾದರೂ ಮನೆ ಬಾಗಿಲು ತಟ್ಟಿದಾಗ, ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡ ನಂತರ ವ್ಯವಹರಿಸಬೇಕು. ಅಪರಿಚಿತರು ಮನೆ ಬಳಿ ಬಂದು ನೀರು, ವಿಳಾಸ ಇತ್ಯಾದಿ ಕೇಳಲು ಬಂದಾಗ ಜಾಗ್ರತೆಯಿಂದ ವ್ಯವಹರಿಸಬೇಕು. ಕಿಟಕಿ ಮತ್ತು ಬಾಗಿಲು ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬಾರದು. ನಿಮ್ಮ ಸಂಪತ್ತು ಅಪರಾಧಗಳಿಗೆ ಪ್ರಚೋದನೆ ನೀಡದಿರಲಿ. ಮೈ ಮೇಲೆ ಒಡವೆಗಳನ್ನು ಧರಿಸಿ ತಿರುಗಾಡುವ ಪರಿಪಾಟವನ್ನು ಆದಷ್ಟು ತಪ್ಪಿಸಿ ಎಂದು ಸಲಹೆ ನೀಡಿದರು.

ಶ್ರೀ ಇಳೈ ಆಳ್ವಾರ್ ಸ್ವಾಮಿ, ಎಎಸ್‌ಐಗಳಾದ ಗೌರಿಶಂಕರಸ್ವಾಮಿ, ರವಿ, ಟ್ರಾಫಿಕ್ ವಾರ್ಡನ್ ಮಹೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net