ಅಪರಾಧ ತಡೆ ಜಾಗೃತಿ ಕಾರ್ಯಕ್ರಮ

10 BELAVANAKI 1
Published on

ಬೆಳವಣಕಿ: ಗ್ರಾಮದ ವಿವಿಧೆಡೆ ಭಾನುವಾರ ಪೊಲೀಸರು ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ರೋಣ ಪೋಲಿಸ್ ಅಧಿಕಾರಿಗಳಾದ ಆನಂದ ಮೇಟಿ, ಎಂ.ಎಸ್. ಪರ್ವತಗೌಡ ನೇತೃತ್ವದ ತಂಡ ಬಸ್ ನಿಲ್ದಾಣ, ಡಾ. ಪುಟ್ಟರಾಜ ಗವಾಯಿಗಳ ಮೂರ್ತಿ ಮುಂಭಾಗದಲ್ಲಿ ಅರಿವು ಮೂಡಿಸಿತು. ಮನೆಕಳವು, ವಾಹನ ಕಳ್ಳತನ, ಸರಗಳ್ಳತನ, ಅಂಗಡಿ ಮುಗ್ಗಟ್ಟುಗಳ ಕಳವು, ಆಭರಣ ಧರಿಸಿದ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಹೋಗಬಾರದು. ಅಪರಿಚಿತರು ವಿಳಾಸ ಕೇಳುವ ನೆಪ ಮಾಡಿ ನಿಮ್ಮ ಹತ್ತಿರ ಬಂದರೆ ಅವರಿಂದ ದೂರ ಇರಬೇಕು. ರೈಲು, ಬಸ್, ಆಟೋ ಹತ್ತುವಾಗ ಕಳ್ಳರ ಬಗ್ಗೆ ಎಚ್ಚರವಿರಲಿ. ನಿಮ್ಮ ಗಮನ ಬೇರೆ ಕಡೆ ಸೆಳೆದು ಕಳವು ಮಾಡುವ ಬಗ್ಗೆ ಹುಷಾರಾಗಿ ಇರಬೇಕು. ತುರ್ತು ಸಂದರ್ಭದಲ್ಲಿ 112 ನಂಬರ್‌ಗೆ ಕರೆ ಮಾಡಬೇಕು ಎಂದು ತಿಳಿಸಿದರು. ಊರಿನ ಗಣ್ಯರಾದ ಬಸನಗೌಡ ಪಾಟೀಲ, ಮಾರುತಿ ಸಣಕಲ್ಲ, ಸೋಮು ಬಿಂಗಿ, ಮಂಜಪ್ಪ ಮಾದರ, ಫಕೀರಪ್ಪ ಸಂಗಳದ, ಸಂಗಪ್ಪ ಹದ್ಲಿ, ಪ್ರಸಾಂತ ನಾಗನೂರ, ರುದ್ರಪ್ಪ ಬಳ್ಳೊಳ್ಳಿ ಇತರರಿದ್ದರು. ನಂತರ ಯಾವಗಲ್ಲ, ಯಾ.ಸ. ಹಡಗಲಿ, ಕೌಜಗೇರಿ, ಗ್ರಾಮಗಳಲ್ಲೂ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net