ಮೈಸೂರಿನಲ್ಲಿ ಇಬ್ಬರು ಮಹಿಳೆಯರಿಗೆ ಅನ್'ಲೈನ್ ಮೂಲಕ ವಂಚನೆ

Cyber Crime
Published on

ಮೈಸೂರು: ಆನ್‌ಲೈನ್ ಮೂಲಕ ಹಣ ದ್ವಿಗುಣ ಮಾಡಿಕೊಳ್ಳುವ ಹಾಗೂ ಬಹುಮಾನದ ಆಸೆಗೆ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ನಗರದಲ್ಲಿ 1.97 ಲಕ್ಷ ರೂ. ಕಳೆದುಕೊಂಡಿದ್ದಾರೆ.

ರಾಜೇಂದ್ರ ನಗರದ ಮಂಗಳಗೌರಿ ಎಂಬವರು 10 ಲಕ್ಷ ರೂ.ಬಹುಮಾನದ ಆಸೆಗೆ 1.22 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇವರ ಮೊಬೈಲ್ಗೆ 10 ಲಕ್ಷ ರೂ. ಲಾಟರಿ ಬಂದಿದೆ ಎಂಬ ಸಂದೇಶ ಬಂದಿದೆ. ಈ ಸಂದೇಶವನ್ನು ಸತ್ಯವೆಂದು ನಂಬಿದ ಮಂಗಳಗೌರಿ ಅವರು ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಸಂಪರ್ಕಿಸಿದರು. ಬಹುಮಾನಕ್ಕೆ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಟ್ಯಾಕ್ಸ್ ಪಾವತಿಸಬೇಕು ಎಂದು ಹೇಳಿ ಅವರಿಂದ 1,22,100 ರೂ. ಪಡೆದು ವಂಚಿಸಿದ್ದಾರೆ.

ಹಣವನ್ನು ದ್ವಿಗುಣ ಮಾಡಿಕೊಡಲಾಗುವುದು ಎಂದು ಸಿದ್ದಾರ್ಥನಗರದ ಭಾಗ್ಯಲಕ್ಷ್ಮಿ ಅವರನ್ನು ನಂಬಿಸಿ 75 ಸಾವಿರ ರೂ.ವಂಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಭಾಗ್ಯಲಕ್ಷ್ಮಿ ಅವರಿಗೆ ಹಣ ದ್ವಿಗುಣಗೊಳ್ಳುವ ಲಿಂಕ್ ಕಳುಹಿಸಿದ. ಅದನ್ನು ನಂಬಿದ ಭಾಗ್ಯಲಕ್ಷ್ಮಿ ಅವರು 75 ಸಾವಿರ ರೂ. ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಕುರಿತು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net