ಪೊಲೀಸರನ್ನು ಕಂಡು ಕದ್ದ ಮಾಲು ಬಿಟ್ಟು ಪರಾರಿಯಾದ ಕಳ್ಳ

kudligi house theft
Published on

ಮೈಸೂರು: ಮನೆಗಳ್ಳನತ ಮಾಡಿ ನಗದು ಹಾಗೂ ಚಿನ್ನಾಭರಣದೊಂದಿಗೆ ತೆರಳುತ್ತಿದ್ದ ಕಳ್ಳನೊಬ್ಬ ಪೊಲೀಸರನ್ನು ಕಂಡು ಕದ್ದ ಮಾಲನ್ನು ಎಸೆದು ಪರಾರಿಯಾಗಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯ ಎಸ್.ಎಂ.ಅನಂತ ಹಾಗೂ ಹೋಂ ಗಾರ್ಡ್ ರಘುಕುಮಾರ್ ಮಾ.25 ರಂದು ರಾತ್ರಿ ಗಸ್ತಿನಲ್ಲಿ ಇದ್ದರು. ಬೆಳಗ್ಗಿನ ಜಾವ 4ಕ್ಕೆ ಹೂಟಗಳ್ಳಿ ಸಿಗ್ನಲ್ ಬಳಿ ವ್ಯಕ್ತಿಯೊಬ್ಬ ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ನಿಂತಿರುವುದನ್ನು ಗಮನಿಸಿದರು. ಪೊಲೀಸರನ್ನು ಗಮನಿಸಿದ ಕಳ್ಳ ತಕ್ಷಣ ತನ್ನ ದ್ವಿಚಕ್ರ ವಾಹನ ಹಾಗೂ ಒಂದು ಬ್ಯಾಗನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ, ನಗದು, ಕಬ್ಬಿಣದ ರಾಡ್ ಇರುವುದು ಪತ್ತೆಯಾಯಿತು. ಬ್ಯಾಗ್‌ನಲ್ಲಿ 7.20 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 50 ಸಾವಿರ ರೂ. ನಗದು ದೊರೆತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net