ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸಮೆಸೇಜ್ ಕಳುಹಿಸಿ ನಾಪತ್ತೆಯಾದ ಕುಟುಂಬ

crime
Published on

ಮೈಸೂರು: ಸಾಲಗಾರರ ಕಾಟದಿಂದ ಬೇಸತ್ತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಳ್ಳುವ ವಾಯ್ಸ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾರೆ.

ಕೆ.ಜಿ.ಕೊಪ್ಪಲಿನ ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ (65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾದವರು. ಮಹೇಶ್ ಅವರು ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ನೇಹಿತರೊಬ್ಬರಿಗೆ ವಾಯ್ಸ ಮೆಸೇಜ್ ಕಳುಹಿಸಿ ಜ.20 ರಿಂದ ನಾಪತ್ತೆಯಾಗಿದ್ದಾರೆ. ಕಾಣೆಯಾದವರನ್ನು ಹುಡುಕಿಕೊಡುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಹೇಶ್ ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದು. ಮಹೇಶ್ ಅವರ ಸ್ನೇಹಿರೊಬ್ಬರು ಮಹೇಶ್ ಹೆಸರು ಹೇಳಿಕೊಂಡು 35 ಲಕ್ಷ ರೂ. ಸಾಲವನ್ನು ಬೇರೊಬ್ಬರಿಂದ ಪಡೆದಿದ್ದರು. ವ್ಯವಹಾರದಲ್ಲಿ ನಷ್ಟವಾದಾಗ ಮಹೇಶ್ ಸ್ನೇಹಿತ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಸಾಲ ನೀಡಿದವರು ಸ್ನೇಹಿತ ಪಡೆದಿರುವ ಸಾಲವನ್ನು ನೀನೇ ತೀರಿಸಬೇಕು ಎಂದು ಮಹೇಶ್ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾರೆ. ಸಾಲಗಾರರ ಒತ್ತಡ ತಾಳಲಾರದೆ ಮಹೇಶ್ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ. ಸರಸ್ವತಿಪುರಂ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net