

ಮೈಸೂರು: ನಗರದ ಮದುವೆ ಮನೆಯೊಂದರಲ್ಲಿ 8 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ವಜ್ರದ ಓಲೆ ಕಳವಾಗಿದೆ.
ಸಿದ್ದಾರ್ಥನಗರದ ನಿವಾಸಿಯಾದ ಉದ್ಯಮಿ ರಾಜೇಂದ್ರಕುಮಾರ್ ಅವರು ತಮ್ಮ ಮಗನ ನಿಶ್ಚಿತಾರ್ಥವನ್ನು ನಗರದ ಹೂಟಗಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದರು. ಮಗಳು ಹಾಗೂ ಭಾವಿ ಸೊಸೆಗೆ ಮೇಕಪ್ ಮಾಡಲು ಮುಂಬೈನಿಂದ ಇಬ್ಬರು ಯುವತಿಯರನ್ನು ಕರೆಯಿಸಿದ್ದರು.
ಮೇಕಪ್ ಮಾಡುವ ವೇಳೆ ಮಗಳ ಬ್ಯಾಗ್‌ನಲ್ಲಿ ವಜ್ರದ ಓಲೆ ಹಾಗೂ ನೆಕ್ಲೆಸ್ ಇತ್ತು, ನಂತರ ಕಾಣೆಯಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.