

ಮೈಸೂರು: ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ ಮಾಂಗಲ್ಯ ಸರ ಕಳವು ಮಾಡಿದ್ದ ಮಹಿಳಾ ಆರೋಪಿಯನ್ನು ನಜರ್‌ಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಿದ್ದಾರ್ಥ ಬಡಾವಣೆಯ ಸನ್ಮಾರ್ಗ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಿಂದ 2 ಲಕ್ಷ ರೂ. ವೌಲ್ಯದ 44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಅ.22 ರಂದು ಕಳುವಾಗಿತ್ತು. ಈ ಕುರಿತು ನ.20 ರಂದು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿದ ಪೊಲೀಸರು ಆರೋಪಿಯ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಜರ್‌ಬಾದ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಮಹದೇವಸ್ವಾಮಿ, ಎಸ್‌ಐ ಶ್ರೀನಿವಾಸ್ ಪಾಟೀಲ್, ಸಿಬ್ಬಂದಿ ಬಿ.ಬಿ. ಪ್ರಕಾಶ್, ಸತೀಶ್ ಕುಮಾರ್, ಕಿರಣ್ ರಾಥೋಡ್, ಮಲ್ಲಿಕಾರ್ಜುನ, ಸಂಜು, ಚೈತ್ರಾ ಮತ್ತು ತಾಂತ್ರಿಕ ವಿಭಾಗದ ಪಿ. ಕುಮಾರ್ ಪಾಲ್ಗೊಂಡಿದ್ದರು.