

ಮೈಸೂರು: ಕಾನೂನು ಬಾಹಿರವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಆರೋಪಿಯಿಂದ 62,500 ರೂ.ನಗದು, ಲ್ಯಾಪ್‌ಟಾಪ್ ಹಾಗೂ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲವತ್ತ ಗ್ರಾಮದ ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.
ಡಿಸಿಪಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ಸಿಸಿಐ ಘಟಕದ ಎಸಿಪಿ ಎಸ್.ಎನ್. ಸಂದಶ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಐ ಘಟಕದ ಇನ್ಸ್‌ಪೆಕ್ಟರ್ ಕೆ.ಸಿ. ಪೂವಯ್ಯ, ಎಎಸ್‌ಐ ಎಸ್. ನಾಗೇಶ್, ಸಿಬ್ಬಂದಿ ಎಚ್.ಪಿ. ಮಧುಕುಮಾರ್, ಕೆ. ಪುಟ್ಟಮ್ಮ, ಕೆ.ಜಿ. ಶ್ರೀನಿವಾಸ್ ಪಾಲ್ಗೊಂಡಿದ್ದರು.