ಹಣಕಾಸು ವಿಚಾರವಾಗಿ ಗಲಾಟೆ, ಸ್ನೇಹಿತನ ಕೊಲೆಯಲ್ಲಿ ಅಂತ್ಯ

Crime Logo
Published on

ಮೈಸೂರು: ಉದಯಗಿರಿಯ ಬೀಡಿ ಕಾಲನಿಯಲ್ಲಿ ಬುಧವಾರ ರಾತ್ರಿ ಹಣಕಾಸು ವಿಚಾರದಲ್ಲಿ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ.

ಬೀಡಿ ಕಾಲನಿ ನಿವಾಸಿ ಆಸಿಫ್ (36) ಹತ್ಯೆಗೀಡಾದ ವ್ಯಕ್ತಿ. ಆರೋಪಿ ಸಲೀಂಪಾಷ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಆಸಿಫ್ ಮತ್ತು ಸಲೀಂಪಾಷ ಸ್ನೇಹಿತರಾಗಿದ್ದು, ಬುಧವಾರ ರಾತ್ರಿ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡರು. ಸಲೀಂಪಾಷ ಮರದ ಪಟ್ಟಿಯಿಂದ ಆಸಿಫ್‌ಗೆ ಮನಬಂದಂತೆ ತಳಿಸಿದ. ತೀವ್ರವಾಗಿ ಗಾಯಗೊಂಡ ಆಸಿಫ್ ಅವರನ್ನು ಕೆ.ಆರ್. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ, ಉದಯಗಿರಿ ಠಾಣೆ ಇನ್ಸ್‌ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net