ಮೂವರು ಬೈಕ್ ಕಳ್ಳರ ಬಂಧನ: ಬಸರಾಳು ಪೊಲೀಸರ ಕಾರ್ಯಾಚರಣೆ

Crime Logo
Published on
ಮಂಡ್ಯ: ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರನ್ನು ಬಸರಾಳು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ಐದೂವರೆ ಲಕ್ಷ ರೂ ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮದ್ದೂರು ತಾಲೂಕಿನ ಅಭಿಷೇಕ್(26), ಮನೋಜ್(24) ಮತ್ತು ಈರಯ್ಯ(30) ಬಂಧಿತರು. ಏ.1ರಂದು ಬಸರಾಳು ಗ್ರಾಮದ ನಾಡಕಚೇರಿ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದರು. ಅಂತೆಯೇ ಶಿವಪುರ ಗ್ರಾಮದ ಸಮೀಪ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಮೂವರು ಬರುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಮುಂದಾದಾಗ ಸಿಕ್ಕಿಬಿದ್ದಿದ್ದಾರೆ. ನಂತರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಗೆ ಬಂದಿದೆ. ಬಸರಾಳು, ಕೆರಗೋಡು, ಶಿವಳ್ಳಿ, ಕೆಂಗೇರಿ, ಐಜೂರು, ಕಿರುಗಾವಲು, ಮಳವಳ್ಳಿ ಗ್ರಾಮಾಂತರ, ಕೊಳ್ಳೇಗಾಲ, ಚನ್ನಪಟ್ಟಣ, ಚನ್ನಪಟ್ಟಣ ಗ್ರಾಮಾಂತರ, ಚನ್ನಪಟ್ಟಣ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.
ತನಿಖಾ ತಂಡದಲ್ಲಿದ್ದ ಕೆರಗೋಡು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಆರ್.ರಘು, ಬಸರಾಳು ಎಸ್‌ಐ ಶೇಷಾದ್ರಿಕುಮಾರ್, ಶಿವಳ್ಳಿ ಎಸ್‌ಐ ಡಿ.ರವಿಕುಮಾರ್, ಸಿಬ್ಬಂದಿ ಇಂದ್ರಕುಮಾರ್, ಮಧುಕುಮಾರ್, ಲೋಕೇಶ ಬನವಾಸಿ, ಮೋಹನನಾಯ್ಕ, ಪ್ರಸನ್ನಕುಮಾರ್, ಮಂಜು, ರವಿಕಿರಣ್, ಲೋಕೇಶ್ ಅವರನ್ನು ಜಿಲ್ಲಾ ಎಸ್ಪಿ ಎನ್.ಯತೀಶ್ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net