ಬೈಕ್ ಕಳವು ಆರೋಪಿ ಬಂಧನ: 30 ವಾಹನಗಳು ವಶ

IMG-20221008-WA0266
Published on

ಮದ್ದೂರು: ವಾಹನ ಕಳವು ಆರೋಪಿಯನ್ನು ಬಂಧಿಸಿರುವ ಪೊಲೀಸರು 30 ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ವೇಣುಗೋಪಾಲ್ ತಿಳಿಸಿದರು.

ಕಾರ್ಯಾಚರಣೆ ಸಂದರ್ಭ ಮುಟ್ಟನಹಳ್ಳಿ ಗ್ರಾಮದ ಅಭಿಷೇಕ್ (22) ಎಂಬಾತನನ್ನು ಬಂಧಿಸಲಾಗಿದೆ ಎಂದು ಮದ್ದೂರು ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಮಂಡ್ಯ, ಮಳವಳ್ಳಿ, ಚನ್ನಪಟ್ಟಣ, ಕೆ.ಎಂ. ದೊಡ್ಡಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಹಳೆಯ ಬೈಕ್ ಕೀಗಳನ್ನು ಬಳಸಿ ವಾಹನ ಕಳವು ಮಾಡಿದ್ದಾನೆ. ಅಂದಾಜು 11,10,000 ರೂ. ಮೊತ್ತದ ವಿವಿಧ ಕಂಪನಿಗಳ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಮಳವಳ್ಳಿ ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ಸಂತೋಷ್, ಪಿಎಸ್‌ಐಗಳಾದ ನರೇಶ ಕುಮಾರ್, ಉಮೇಶ್, ಅಯ್ಯನಗೌಡ, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net