ಪತ್ನಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಬಂಧನ

Crime Logo
Published on

ಮಂಡ್ಯ: ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಸಾಯಪನಹಳ್ಳಿ ಗ್ರಾಮದ ಸುಬ್ರಹ್ಮಣ್ಯ ಬೆಟ್ಟದ ನಿವಾಸಿ ವರ್ಷಿತಾ(21)ಅವರನ್ನು ಕೊಲೆ ಮಾಡಿದ್ದ ಪತಿ ಗೌತಮ್ (24) ನನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕಳೆದ ಗುರುವಾರ ಮಧ್ಯಾಹ್ನ ಮನೆಗೆ ಬಂದಾಗ ತಾನು ಹೇಳಿದ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಗೌತಮ್ ಪತ್ನಿಯನ್ನು ಹೊಡೆದು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ತನ್ನ ಒಂದೂವರೆ ವರ್ಷದ ಪುತ್ರನಿಗೂ ಹೊಡೆದು ಪರಾರಿಯಾಗಿದ್ದ. ಸಂಜೆತನಕ ಮನೆಯ ಬಳಿ ಇದ್ದ ಜಮೀನಿನಲ್ಲಿ ಕುರಿ ಮೇಯಿಸಿ, ಸಂಜೆ ಮನೆ ಬಳಿ ಬಂದು ಯಾರೋ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಸಂಬಂಧಿಕರಿಗೆ ಹೇಳಿ ಸ್ಥಳದಿಂದ ಪರಾರಿಯಾಗಿದ್ದ.

ಈತನನ್ನು ಶನಿವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಅರುಳಕುಪ್ಪೆ ಗ್ರಾಮ ಬಳಿ ಪೊಲೀಸರು ಬಂಧಿಸಿದ್ದಾರೆ. ಎಸ್ಪಿ ಯತೀಶ್ ಮತ್ತು ಡಿವೈಎಸ್ಪಿ ಮುರಳಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಕೆ.ಆರ್.ಸಾಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಪುನೀತ್ ನೇತೃತ್ವದಲ್ಲಿ ಪಿಎಸೈ ಬಸವರಾಜು, ಎಎಸ್‌ಐ ನಟರಾಜು, ದೇವರಾಜು, ಸಿಬ್ಬಂದಿ ಸತೀಶ, ಶ್ರೀಧರ, ರವೀಶ್, ಪ್ರಭುಸ್ವಾಮಿ, ಮಂಜುನಾಥ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net