ಅಕ್ರಮ ಕಸಾಯಿಖಾನೆಗೆ ದಾಳಿ

kasayi
Published on

ಕಾರ್ಕಳ: ಮುಡಾರು ಗ್ರಾಮ ಪಾಜಿನಡ್ಕದ ಹಾಡಿಯಲ್ಲಿ ಅಕ್ರಮ ಕಸಾಯಿಖಾನೆಗೆ ಕಾರ್ಕಳ ಗ್ರಾಮಾಂತರ ಠಾಣೆ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ಮೂರು ಜಾನುವಾರು, ಝೈಲೋ ಕಾರು, ಮೂರು ಹುರಿದ ಹಗ್ಗಗಳನ್ನು ವಶಪಡಿಸಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಮಂಗಳವಾರ ನಸುಕಿನ ಜಾವದಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿತರು ಪರಾರಿಯಾಗಿರುತ್ತಾರೆ. ಝೈಲೋ ಕಾರಿನ ಚಾಲಕ ಹಾಗೂ ಇನ್ನೋರ್ವ ತಮ್ಮ ಸ್ವಂತ ಲಾಭಕ್ಕಾಗಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಒಂದು ಹಸು ಹಾಗೂ ಎರಡು ಕರುವನ್ನು ಅವುಗಳ ಕುತ್ತಿಗೆಗೆ ಹುರಿಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿ ಝೈಲೋ ಕಾರಿನ ಹಿಂಭಾಗದಲ್ಲಿ ಇರಿಸಿದ್ದರು. ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಮೂಡುಬಿದಿರೆ ತೋಡಾರು ಹಾಗೂ ಬಜ್ಪೆ ಠಾಣಾ ವ್ಯಾಪ್ತಿಯವರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net