

ಕಲಬುರಗಿ: ನಗರದ ಸೂಪರ್ ಮಾರ್ಕೆಟ್ನಲ್ಲಿ ವ್ಯಕ್ತಿಯೊಬ್ಬನನ್ನು ತಡೆದ ಮೊಬೈಲ್, ಬೆಳ್ಳಿ ಚೈನ್ ದೋಚಿದ್ದು, ಶಹಾಬಾದ್ ರಸ್ತೆಯಲ್ಲಿರುವ ಅಂಭಾ ಭವಾನಿ ದೇವಸ್ಥಾನಕ್ಕೆ ಸ್ನೇಹಿತೆ ಜತೆಗಿದ್ದ ವ್ಯಕ್ತಿಯನ್ನು ಬೆದರಿಸಿ ಬಂಗಾರದ ಚೈನ್, 25 ಸಾವಿರ ರೂ. ದರೋಡೆ ಮಾಡಿದ ಟನೆ ನಡೆದಿದ್ದು, ಮತ್ತೊಂದೆಡೆ ಪೆಟ್ರೋಲ್ ಪಂಪ್ನಲ್ಲಿ ಕೆಲಸಗಾರನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ ಪ್ರತ್ಯೇಕ ಟನೆಗಳು ನಡೆದಿವೆ.
ಬ್ರಹ್ಮಪುರ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಬಸ್ಸ್ಟಾಂಡ್ ಛಾವಣಿ ಮೇಳೆ ಹೋಗಿದ್ದ ತಯ್ಯಾಬ್ ಮೈಬೂಬ್ಸಾಬ್ನನ್ನು ತಡೆದ ನಾಲ್ವರು ಅಪರಿಚಿತರು ಚಾಕುವಿನಿಂದ ಹಲ್ಲೆ ಮಾಡಿ, ಆತನ ಬಳಿ ಇದ್ದ ಮೊಬೈಲ್ ೋನ್, ಮೂರು ತೊಲಿ ಬೆಳ್ಳಿ ಚೈನ್ ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಸಬ್ ಅರ್ಬನ್ ಠಾಣೆ ವ್ಯಾಪ್ತಿಯ ವಿಶ್ವಾರಾಧ್ಯ ದೇವಸ್ಥಾನದ ಬಳಿಯ ಪೆಟ್ರೋಲ್ ಪಂಪ್ನ ಕೆಲಸಗಾರನ ಮೇಲೆ ಹಲ್ಲೆ ಮಾಡಲಾಗಿದೆ. ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತ್ರಿಶೂಲ್ನ ಮೇಲೆ ಆರೇಳು ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲ್ಲೆ ದೃಶ್ಯ ಬಂಕ್ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ನಗರದ ಶಹಾಬಾದ್ ರಸ್ತೆಯ ಅಂಬಾಭವಾನಿ ದೇವಸ್ಥಾನಕ್ಕೆ ಸ್ನೇಹಿತ ಜತೆಗೆ ಕಾರ್ನಲ್ಲಿ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಲಾಗಿದೆ. ಬೀದರ್ ಜಿಲ್ಲೆ ಚಿಟಗುಪ್ಪದ ಅಮರ ಹಸರಗುಂಡಿ ದರೋಡೆಗೆ ಒಳಗಾದವರು. ಶನಿವಾರ ಸ್ನೇಹಿತೆ ಜತೆಗೆ ಕಾರ್ನಲ್ಲಿ ಶಹಾಬಾದ್ ರಸ್ತೆಯಲ್ಲಿರುವ ದಾಬಾವೊಂದರಲ್ಲಿ ಊಟ ಮಾಡಿ, ಅಂಬಾ ಭವಾನಿ ದೇವಸ್ಥಾನಕ್ಕೆ ಹೋಗಿದ್ದಾಗ, ಬೈಕ್ ಮೇಲೆ ಮೂವರು ಅಪರಿಚಿತರು ಚಾಕು ತೋರಿಸಿ, ಅಮರ ಬಳಿ ಇದ್ದ ಒಂದು ತೊಲೆಯ, ಅರ್ದ ತೊಲೆಯ ಲಾಕಿಟ್, 25 ಸಾವಿರ ರೂ. ದೋಚಿಕೊಂಡು ಹೋಗಿದ್ದಾರೆ. ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.