

ಬೆಳಗಾವಿ: ಪೊಲೀಸ್ ಇನ್ಸಪೆಕ್ಟರ್ ಅವರ ಹೆಸರಿನಲ್ಲಿ ನಕಲಿ ವಾಟ್ಸ್ಪ್ ಪ್ರೋಪೈಲ್ ಹಾಗೂ ಪೇಸ್ಬುಕ್ ಪ್ರೋಪೈಲ್ ಸೃಷ್ಟಿ ಮಾಡಿ ಜನರಿಗೆ ಮೋಸಮಾಡಲು ಯತ್ನಿಸುತ್ತಿರುವ ಅಪರಿಚಿತ ವ್ಯಕ್ತಿಗಳ ಮೇಲೆ ಗುರುವಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮೌನೇಶ್ವರ ಮಾಲಿ ಪಾಟೀಲ ಅವರ ಸಮವಸ್ತ್ರವಿರುವ ಭಾವಚಿತ್ರವನ್ನು ಅಪರಿಚಿತ ವ್ಯಕ್ತಿಯೊಬ್ಬನು ಕದ್ದುಕೊಂಡು ಇನ್ಸ್ಪೆಕ್ಟರ್ ಹೆಸರಿನಲ್ಲಿ ನಕಲಿ ವಾಟ್ಸ್ಪ್ ಹಾಗೂ ಪೇಸ್ಬುಕ್ ಪ್ರೋಪೈಲ್ ಸೃಷ್ಟಿ ಮಾಡಿದ್ದಾನೆ. ಅಲ್ಲದೆ, ಇನ್ಸ್ಪೆಕ್ಟರ್ಗೆ ಇನ್ನೋಬ್ಬ ಸ್ನೇಹಿನಂತೆ ನವೀನ ಸಿಂಗ ತೋಮರ ಎನ್ನುವ ಇನ್ನೋಂದು ನಕಲಿ ಮೊಬೈಲ್ ನಂಗೆ ವಾಟ್ಸ್ಪ್ ಸೃಷ್ಟಿಸಿ ನಾನು ಸಿಐಎಸ್ಎಫ್ ಅಧಿಕಾರಿಯಾಗಿದ್ದ ನನ್ನ ವರ್ಗಾವಣೆ ಆಗಿದೆ ನನ್ನ ಮನೆಯಲ್ಲಿರುವ ಪರ್ನಿಚರಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದೇನೆ ಎಂದು ಸಾರ್ವಜನಿಕರಿಗೆ ಮೇಸೆಜ್ ಕಳುಹಿಸಿ ಹಣವನ್ನು ಪಡೆಯಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.