ಬಂಗಾರ ಅಂಗಡಿ ಕಳ್ಳತನ; ೨೪ ಗಂಟೆಯಲ್ಲಿ ಕಳ್ಳರ ಬಂಧನ

IMG-20230728-WA0055.jpg
Published on


ಬೆಳಗಾವಿ:ಕಿತ್ತೂರು ಪಟ್ಟಣ ಸೋಮವಾರ ಪೇಟೆಯಲ್ಲಿ ಬಂಗಾರ ಅಂಗಡಿ  ಕಳ್ಳತನ ಪ್ರಕರಣಕ್ಕೆ ಸಂಬAಽಸಿದAತೆ ಶುಕ್ರವಾರ ಪೊಲೀಸರು ಇಬ್ಬರನ್ನು ಬಂಽಸಿ ೧.೮೨ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಕಿತ್ತೂರು ಪಟ್ಟಣದ ಅಬುಬಕರ್ ಸನದಿ(೨೩), ಅಪ್ರಾಪ್ತನನ್ನು ಪೊಲೀಸರು ಬಂಽಸಿದ್ದಾರೆ.
ಜು.೨೭ರAದು ಸೋಮವಾರ ಪೇಟೆಯಲ್ಲಿದ್ದ ಮಾನಜ್ಜಾ ಜುವೆರ‍್ಸ್ ಅಂಬುವ ಬಂಗಾರ ಅಂಗಡಿಯ ಬಾಗಿಲು ಮುರಿದು ೩೧ ಗ್ರಾಂ ಬಂಗಾರದ ಆಭರಣಗಳು, ೧ಕೆಜಿ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು ೧,೮೨,೫೦೦ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು  ಶುಕ್ರವಾರ ಅಂಗಡಿಯ ಮಾಲೀಕ ಸುಬ್ರಮಣ್ಯಂ ಮಾರ್ತಾಂಡಪ್ಪಾ ಪತ್ತಾರ ಎಂಬುವವರು ದೂರು ದಾಖಲಿಸಿದ್ದರು. ಈ ಕುರಿತು ಡಿಎಸ್‌ಪಿ ರವಿ. ಡಿ. ನಾಯ್ಕ ನೇತೃತ್ವದ  ತನಿಖಾ ತಂಡವು  ಕಳತನವಾದ ೨೪ ಗಂಟೆಯಲ್ಲಿ   ೧.೮೨ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯನ್ನು ವಶಪಡಿಸಿಕೊಂಡು ಆರೋಪಿತರನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net