

ಬೆಳಗಾವಿ: ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹಾರೂಗೇರಿ ಠಾಣೆ ಪೊಲೀಸರು ತಂದೆ, ಮಗನನ್ನು ಬಂಧಿಸಿದ್ದಾರೆ.
ಹಿಡಕಲ್ ಗ್ರಾಮದ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ (54), ಬಸಯ್ಯ ಹಿರೇಮಠ (26) ಬಂಧನಕ್ಕೆ ಒಳಗಾದವರು.
ಹಿಡಕಲ್ ಗ್ರಾಮದ ಹೊಸಟ್ಟಿ ತೋಟದ ಮನೆಯಲ್ಲಿ ಜು.8ರಂದು ರಾತ್ರಿ ಸಮಯದಲ್ಲಿ ಮೃತ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮದ್ಯ ಸೇವನೆ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದನು. ಈ ವೇಳೆ ತಂದೆಯ ಜತೆಗೆ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೃತನ ಸಹೋದರ ಬಸಯ್ಯ ಹಿರೇಮಠ ಮತ್ತು ತಂದೆ ಸೇರಿಕೊಂಡು ಆಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದನು. ಅಲ್ಲದೆ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ತಾವೇ ಮೃತ ಸೋಮಯ್ಯ ಶವವನ್ನು ಜಮೀನಿನಲ್ಲಿ ಸುಟ್ಟು ಅಂತ್ಯಕ್ರಿಯೆ ನೆರವೇರಿಸಿದ್ದರು.
ದೂರಿನ ಹಿನ್ಮೆಲೆ ತನಿಖೆ ಕೈಗೊಂಡ ಪೊಲೀಸರು ಚಿತಾಗಾರದಿಂದ ಅಸ್ಥಿಪಂಜರದ ಅವಶೇಷಗಳನ್ನು ಪರಿಶೀಲಿಸಿ ಕೊಲೆ ಬೇದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.