ಆಯತಪ್ಪಿ ಘಟಪ್ರಭಾ‌ ನದಿಗೆ ಬಿದ್ದವರು ಶವವಾಗಿ ಪತ್ತೆ

IMG-20230711-WA0015.jpg
Published on


ಬೆಳಗಾವಿ: ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಳಿ ಘಟಪ್ರಭಾ‌ ನದಿ ದಾಟುವಾಗ ಆಯತಪ್ಪಿ ಬಿದ್ದಿದ್ದ ಇಬ್ಬರಲ್ಲಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಅವರಾದಿ ಗ್ರಾಮದ ದುರ್ಗಮ್ಮ ಹರಿಜನ ಹಾಗೂ ಚನ್ನಪ್ಪ ಹರಿಜನ ಅವರು ಸೋಮವಾರ ನದಿ ದಾಟುವಾಗ ಬೈಕ್ ಸಮೇತ ಬಿದ್ದಿದ್ದರು.
ಎಸ್ ಡಿಆರ್ ಎಫ್  ತಂಡ ನಿನ್ನೆಯಿಂದ ಕಾರ್ಯಾಚರಣೆ ನಡೆಸಿ ಚನ್ನಪ್ಪ ಹರಿಜನ ಮೃತದೇಹ ಪತ್ತೆ ಹಚ್ಚಿದೆ.ನದಿಯಲ್ಲಿ ಕಣ್ಮರೆಯಾಗಿದ್ದ ದುರ್ಗಮ್ಮ ಹರಿಜನಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಅವರಾದಿ ಗ್ರಾಮದಿಂದ ಮಹಾಲಿಂಗಪುರಕ್ಕೆ ಕೆಲಸದ ನಿಮಿತ್ಯ ತೆರಳುವಾಗ ನಡೆದ ಘಟನೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net