

ಬೆಳಗಾವಿ: ಕೆಲಸ ಕೊಡಿಸುವುದಾಗಿ ಟೆಲಿಗ್ರಾಂ ಆಪ್ ಚಾಟಿಂಗ್ ಮಾಡಿ ಹಣವನ್ನ ಡಬಲ್ ಮಾಡೋದಾಗಿ ಹೇಳಿ ಮೋಸ ಮಾಡಿದ್ದ ಖದೀಮರು ಜಾಲವನ್ನು ಭೇದಿಸುವಲ್ಲಿ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಬಾಗದ ಶಿಲ್ಪಾ ಶಿರಗನಣ್ಣವರ, ನಿಪ್ಪಾಣಿಯ ಆಶಾ ಕೋಟಿವಾಲೆ ಮೋಸ ಹೋದ ಮಹಿಳೆಯರು. ಇವರಲ್ಲಿ ಬ್ಯಾಂಕ್ ಉದ್ಯಮಿ ಮತ್ತೊಬ್ಬರು ಡಾಕ್ಟರ್ ವೃತ್ತಿ ಮಾಡುತ್ತಿದ್ದರು. ಒಟ್ಟು 21 ಬ್ಯಾಂಕ್ ಖಾತೆಗೆ ಹಣವನ್ನು ಖದೀಮರು ಹಾಕಿಸಿಕೊಂಡಿದ್ದರು.
ಪ್ರತ್ಯೇಕ ಎರಡು ಪ್ರಕರಣದಲ್ಲಿ 46,15,906 ರೂ. ವಂಚನೆ ಪ್ರಕರಣ ದಾಖಲಾಗಿವೆ ಎಂದು ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್.ಗಡೇಕರ್ ತಿಳಿಸಿದ್ದಾರೆ.