೧೦ ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ

IMG-20230826-WA0020.jpg
Published on


ಬೆಳಗಾವಿ:ಇಲ್ಲಿನ ಸಮರ್ಥ ನಗರದಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬAಽಸಿದAತೆ ಮಾರ್ಕೆಟ್ ಠಾಣೆ ಪೊಲೀಸರು ಶನಿವಾರ ೧೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡು ಮನೆಗಳ್ಳನನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಪ್ಪಾಣಿಯ  ಯಾಸೀನ ಹಾಸಿಂ ಶೇಖ (೨೩) ಬಂಽತ ವ್ಯಕ್ತಿ.
ಆ.೨೦ರಂದು ಸಮರ್ಥ ನಗರದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಚಿನ್ನ, ಬೆಳ್ಳಿ  ಆಭರಣ ಹಾಗೂ ನಗರ ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಎಸಿಪಿ ಎನ್.ವಿ.ಭರಮನಿ ನೇತೃತ್ವದಲ್ಲಿ ಪಿಐ ಮಹಾಂತೇಶ ಧಾಮನ್ನವರ ತಂಡವು ತನಿಖೆ ನಡೆಸಿ  ಮನೆಗಳ್ಳನನ್ನು ದಸ್ತಗಿರಿ ಮಾಡಿ ಈತನಿಂದ ಸುಮಾರು ೧೦ ಲಕ್ಷ ರೂ. ಮೌಲ್ಯದ ೨೩೧ ಗ್ರಾಂ ಬಂಗಾರ ಮತ್ತು ೧೪೦ ಗ್ರಾಂ ಬೆಳ್ಳಿಯ ಆಭರಣಗಳನ್ನು ವಡಿಸಿಕೊಂಡಿದ್ದಾರೆ.
ಮಾರ್ಕೆಟ್ ಠಾಣೆಯ ಪಿಎಸ್‌ಐ  ವಿಠ್ಠಲ ಹಾವನ್ನವರ, ಮಹಾಂತೇಶ ಮಠಪತಿ, ಶರತಕುಮಾರ ಖಾನಾಪೂರೆ, ವಿಶ್ವನಾಥ ಮಾಳಗಿ, ಶಂಕರ ಕುಗಟೊಳ್ಳಿ, ಖಾದರಸಾಬ ಖಾನಮ್ಮನವರ, ಲಕ್ಷ÷್ಮಣ ಕಡೋಲ್ಕರ,ಆಶೀರ್ ಜಮಾದಾರ, ಶಿವಾನಂದ ಚಂಡಕಿ, ವಿನೋದ ಜಗದಾಳೆ, ಶಿವಪ್ಪಾ ತೇಲಿ, ಸಂಜು ಪಾತ್ರೋಟ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಎನ್.ಎಸ್.ಸಿದ್ದರಾಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net