ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಿಎಸ್‌ಐ ವಿಜಯ ಪ್ರತಾಪ

CRIME SHIBIRA
ಯಲಬುರ್ಗಾ ತಾಲೂಕಿನ ಮಲಕಸಮುದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 6ನೇ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಅಪರಾಧಗಳ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಜಯ ಪ್ರತಾಪ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎಚ್.ಎಂ.ಗುಡಿಹಿಂದಿನ, ಪ್ರಮುಖರಾದ ಕನಕರಾಯ ಭಜಂತ್ರಿ, ಅಶ್ರಫ್ ಅಲಿ ಬಡಿಗೇರ್ ಇದ್ದರು.
Published on

ಯಲಬುರ್ಗಾ: ಅಪರಾಧಗಳು ನಡೆದ ಬಳಿಕ ತನಿಖೆ ನಡೆಸುವುದಕ್ಕಿಂತ ಅಪರಾಧಗಳು ಆಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಯಲಬುರ್ಗಾ ಪಿಎಸ್‌ಐ ವಿಜಯ ಪ್ರತಾಪ ಹೇಳಿದರು.

ತಾಲೂಕಿನ ಮಲಕಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆಯ 6ನೇ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಅಪರಾಧಗಳ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾತರ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕು, ಕರ್ತವ್ಯ ನೀಡಿದೆ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಅವುಗಳ ಬಗ್ಗೆ ಜಾಗೃತಿ ಹೊಂದಬೇಕು. ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಯಿಂದ ದೂರವಿದ್ದು, ವಿದ್ಯಾಭ್ಯಾಸದತ್ತ ಗಮನಹರಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು.

ಸಹಾಯಕ ಪ್ರಾಧ್ಯಾಪಕ ಎಚ್.ಎಂ.ಗುಡಿಹಿಂದಿನ, ಗಣ್ಯರಾದ ಕನಕರಾಯ ಭಜಂತ್ರಿ, ಅಶ್ರಫ್ ಅಲಿ ಬಡಿಗೇರ್, ನೀಲಪ್ಪ ಮರಾಠಿ, ವೀರೇಶ ಗಜೇಂದ್ರಗಡ, ಶರಣಪ್ಪ ಗುಡ್ಲಾನೂರು, ನಿಸ್ಸಾರ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net