ಅಪರಾಧದ ಅರಿವು ಮೂಡಿಸುವುದು ಅಗತ್ಯ

19 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಪರಾಧಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ಅರಿವು ಮೂಡಿಸುವ ಪ್ರಮುಖ ಕಾರ್ಯ ಹಾಗೂ ಅಪರಾಧಶಾಸ್ತ್ರ ವಿಷಯಕ್ಕೆ ಸಂಬಂಧಿತ ಶಿಕ್ಷಣ ಅತಿ ಅವಶ್ಯಕ ಎಂದು ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ಜೆಎಸ್​ಎಸ್​ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ಐಐಟಿ ಹೈದರಾಬಾದ್​ ಇ-ಕೋಶದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಝೊನಲ್​ ಚಾಂಪಿಯನ್​ಶಿಪ್​ ಸ್ಪರ್ಧೆ, ನ್ಯಾಯ ವಿಜ್ಞಾನ ಹಾಗೂ ಅಪರಾಧಶಾಸ್ತ್ರ ಕುರಿತ ಎರಡು ದಿನಗಳ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ವಿವಿಯ ಪ್ರದಿಪಕುಮಾರ ಮಾತನಾಡಿ, ಕಮ್ಮಟದ ಧ್ಯೇಯೋದ್ದೇಶ ಹಾಗೂ ಕಮ್ಮಟದಲ್ಲಿ ಭಾಗವಹಿಸುವುದರಿಂದ ಭವಿಷ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಆಗುವ ಲಾಭದ ಮಾಹಿತಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಚ್​. ನಾಗಚಂದ್ರ ಮಾತನಾಡಿ, ಅಪರಾಧಶಾಸ್ತ್ರದ ವೈಜ್ಞಾನಿಕ ಹಿನ್ನೆಲೆ ಹಾಗೂ ವಿಧಿ ವಿಜ್ಞಾನದ ಕುರಿತು ಮಾಹಿತಿ ನೀಡಿದರು.
ಜೆಎಸ್​ಎಸ್​ನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್​ ಜೈನ, ಡಾ. ಜಗದೀಶ ಬರಗಿ, ಡಾ. ಬಸವರಾಜ, ಡಾ. ವೆಂಕಟೇಶ ಮುತಾಲಿಕ, ಗಂಗಾ ಚವಣ್ಣವರ, ಜೆ.ಆರ್​. ಕುಂದಗೋಳ, ಮಮತಾ ಮಾಂಡವಿ, ಸೌಮ್ಯ ಪಾಟೀಲ, ಡಾ. ಸುಕುಮಾರ, ಪ್ರಿಯಾಂಕಾ ನಾಟೀಕರ, ಡಾ. ಅನಿತಾ ಪುರಾಣಿಕ, ತನುಜಾ ರೋಖಡೆ, ಇತರರು ಇದ್ದರು.
ಡಾ. ರತ್ನಾ ಐರಸಂಗ ಸ್ವಾಗತಿಸಿದರು. ಡಾ. ಆರ್​.ಎಂ. ಪತ್ತಾರ ನಿರೂಪಿಸಿದರು. ಡಾ. ಜಯಶ್ರೀ ಕುರಂದವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net