ಕಣ್ಣಿಗೆ ಖಾರ ಪುಡಿ ಎರಚಿ ರೌಡಿಶೀಟರ್​ನ ಕೊಲೆ

murder
Published on

ಮಂಡ್ಯ: ಕಣ್ಣಿಗೆ ಖಾರ ಪುಡಿ ಎರಚಿ ರೌಡಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಮಂಡ್ಯದಲ್ಲಿ ಈ ಕೊಲೆ ನಡೆದಿದ್ದು, ರೌಡಿಶೀಟರ್​ ಪಾಲಹಳ್ಳಿ ಹರೀಶ್ ಅಲಿಯಾಸ್​ ಕಳ್ಳಪಚ್ಚಿ ಹತ್ಯೆಗೀಡಾಗಿದ್ದಾನೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನತಿಟ್ಟು ಕ್ರಾಸ್​ ಬಳಿ ರಾತ್ರಿ ಈ ಪ್ರಕರಣ ನಡೆದಿದೆ. ಹರೀಶ್​ ಶ್ರೀರಂಗಪಟ್ಟಣದಿಂದ ಪಾಲಹಳ್ಳಿಗೆ ಕಾರಿನಲ್ಲಿ ಹೋಗುತ್ತಿರುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಭೀಕರ ಹಲ್ಲೆಯಿಂದಾಗಿ ಹರೀಶ್ ಮೃತಪಟ್ಟಿದ್ದು, ಶವ ರಕ್ತದ ಮಡುವಿನಲ್ಲಿ ಬಿದ್ದಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ಶೋಧ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net