

ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿ ಪುತ್ತೂರು-ಈಶ್ವರಮಂಗಲ ರಸ್ತೆ ಬದಿಯಲ್ಲಿರುವ ಸಾರ್ವಜನಿಕ ಪ್ರಯಾಣಿಕರ ಬಸ್ಸು ತಂಗುದಾಣದಲ್ಲಿ ಯಾರೋ ಕಿಡಿಗೇಡಿಗಳು ಹಿಂದು ದೇವರ ಹೆಸರಿನೊಂದಿಗೆ ಕೀಳುಮಟ್ಟದ ಪದಗಳನ್ನು ಜೋಡಿಸಿ ಬರೆದು ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾರೆಂದು ಹಿಂದು ಜಾಗರಣಾ ವೇದಿಕೆಯ ವತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಯಾರೋ ಕಿಡಿಗೇಡಿಗಳು ಅ.15ರಂದು ರಾತ್ರಿ ಈ ಕೃತ್ಯ ಎಸಗಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನದ ಜತೆಗೆ ಬಸ್ಸು ತಂಗುದಾಣದ ಅಂದವನ್ನು ವಿರೋಪಗೊಳಿಸಿದ್ದಾರೆ ಎಂದು ಆರೋಪಿಸಿದ್ದು, ನೆಟ್ಟಣಿಗೆ ಮುಡ್ನೂರು ಗ್ರಾಪಂಗೂ ದೂರು ನೀಡಲಾಗಿದೆ.
ಹಿಂದೂ ಜಾಗರಣಾ ವೇದಿಕೆ ಈಶ್ವರಮಂಗಲ ಘಟಕ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಎಂ. ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.