ನಾಲೆಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ

crime
Published on

ಚನ್ನರಾಯಪಟ್ಟಣ: ತಾಲೂಕಿನ ಶ್ರೀರಾಮದೇವರ ನಾಲೆಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ತಾಲೂಕಿನ ಕಸಬಾ ಹೋಬಳಿ ಅಡಗೂರು ಗ್ರಾಮದಲ್ಲಿ ಹಾದು ಹೋಗಿರುವ ನಾಲೆಯಲ್ಲಿ ಶವ ಪತ್ತೆಯಾಗಿದೆ.

ವಯಸ್ಸು ಸುಮಾರು 28 ರಿಂದ 33 ವರ್ಷ, 162 ಸೆಂ.ಮೀ. ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಬಲ ಕಿವಿಯಲ್ಲಿ ಬೆಳ್ಳಿಯಂತಿರುವ ರಿಂಗ್ ಇದೆ. ಬಲಗೈಯಲ್ಲಿ ಬೈರ, ಎಡಗೈಯಲ್ಲಿ ರಂಜಿತ ಎಂದು ಹಚ್ಚೆ ಇದೆ. ಬಲತೋಳಿನಲ್ಲಿ ಗಣೇಶನ ಮುಖದ ಹಚ್ಚೆ ಹಾಗೂ ಎಡತೋಳಿನಲ್ಲಿ ಕುದುರೆ ಮುಖದ ಹಚ್ಚೆ ಇದೆ. ಶವವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಶವ ಇಡಲಾಗಿದ್ದು. ವಾರಸುದಾರರಿದ್ದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net