ಸಾವಿನಲ್ಲೂ ಒಂದಾದ ದಂಪತಿ : ಪತಿ ಮರಣದ ತಾಸುಗಳ ಮಧ್ಯೆ ಕುಸಿದುಬಿದ್ದು ಪತ್ನಿ ಮೃತ್ಯು

New Project (34)
Published on

ಕಾಸರಗೋಡು: ಕೂಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಪತಿ ಮೃತಪಟ್ಟ ಬೆನ್ನಿಗೇ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಕುಂಬಳೆ ಸನಿಹದ ಪುತ್ತಿಗೆಯಲ್ಲಿ ನಡೆದಿದೆ.

ಪುತ್ತಿಗೆ ಪಂಚಾಯಿತಿ ಬಾಡೂರು ಪ.ಜಾ. ಕಾಲನಿ ನಿವಾಸಿ ಸಂಜೀವ(55) ಹಾಗೂ ಅವರ ಪತ್ನಿ ಸುಂದರಿ(50) ಮೃತಪಟ್ಟವರು. ಗುರುವಾರ ಬಾಡೂರು ಸನಿಹದ ಚಾಕಟಚಾಲ್ ಎಂಬಲ್ಲಿ ಸಂಜೀವ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

ಸಂಜೀವ ಅವರ ಮೃತದೇಹವನ್ನು ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಬಳಿಕ ಕೆಲವೇ ತಾಸುಗಳಲ್ಲಿ ಸುಂದರಿ ಅವರೂ ಮನೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ಅವರೂ ಕೊನೆಯುಸಿರೆಳೆದರು. ಸುಂದರಿ ಅವರು ಅಂಗನವಾಡಿ ಸಹಾಯಕಿಯಾಗಿದ್ದರು. ದಂಪತಿಗೆ ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net