ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಂದ ಮಗ

Crime Logo
Published on

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ಶುಕ್ರವಾರ ಹಣ ಹಾಗೂ ಬೈಕ್ ಕೀ ಕೊಡಲಿಲ್ಲ ಎಂಬ ಕಾರಣಕ್ಕೆ ಕುಡಿದ ಮತ್ತಿನಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ.

ಶಶಿಧರ್ ಪೂಜಾರಿ(64)ಮೃತ. ಆರೋಪಿ ದಿನೇಶ ಕೊಲೆ ಆರೋಪಿ. ಈತ ಪತ್ನಿಯಿಂದ ವಿಚ್ಚೇದನ ಪಡೆದು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟವಿತ್ತು. ಶುಕ್ರವಾರ ಕುಡಿದು ಬಂದ ಆರೋಪಿ ದಿನೇಶ, ತಂದೆ ಬಳಿ ಹಣ ಮತ್ತು ಬೈಕ್ ಕೀ ಕೊಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೊಪ್ಪದ ತಂದೆಗೆ ಕಾಲಿನಿಂದ ಎದೆಗೆ ಒದ್ದಿದ್ದಾನೆ. ಇದನ್ನು ನೋಡಿದ ಆರೋಪಿ ತಾಯಿ ರಕ್ಷಣೆಗಾಗಿ ಹೋಗಿದ್ದಾರೆ. ಗಾಯಗೊಂಡಿದ್ದ ಶಶಿಧರ್ ಪೂಜಾರಿ ಎದೆ ನೋವೆಂದು ಹೇಳಿದ್ದಾರೆ. ಪತ್ನಿ ಚಿಕಿತ್ಸೆಗೆಂದು ಆಟೋದಲ್ಲಿ ಅರೇಹಳ್ಳಿ ಆಸ್ಪತ್ರೆಗೆ ಕರೆ ತಂದಾಗ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ವೈದ್ಯರು ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದಿನೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net