ಮನೆ ಕಿಟಿಕಿ ಬಾಗಿಲಿಗೆ ಗುಂಡು

bullets
Published on

ಕಾಸರಗೋಡು: ಚೀಮೇನಿ ಎಸ್ಟೇಟ್‌ನಲ್ಲಿ ಹಾರಿಸಿದ ಗುಂಡು ಸಮೀಪದ ನಿವಾಸಿ ಪದ್ಮನಾಭನ್ ಎಂಬುವರ ಮನೆಯ ಕಿಟಕಿ ಬಾಗಿಲಿಗೆ ಬಡಿದು ಹಾನಿಯಾಗಿದೆ. ರಾಜ್ಯ ತೋಟಗಾರಿಕಾ ನಿಗಮದ ಚೀಮೇನಿ ಎಸ್ಟೇಟ್ ಸಮೀಪ ಇವರು ಮನೆ ಹೊಂದಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಕಾಡುಹಂದಿ, ಮೊಲ, ಮುಳ್ಳುಹಂದಿ, ಜಿಂಕೆ ಸುತ್ತಾಡುತ್ತಿದ್ದು, ಇವುಗಳ ಬೇಟೆಯಾಡುವ ಉದ್ದೇಶದಿಂದ ಸಿಡಿಸಿದ ಗುಂಡು ಆಯತಪ್ಪಿ ಮನೆಗೆ ಬಡಿದಿರಬೇಕೆಂದು ಸಂಶಯಿಸಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್ ತಂಡ ಭೇಟಿ ನೀಡಿ, ಚದುರಿದ್ದ ಮದ್ದುಗುಂಡು ವಶಕ್ಕೆ ಪಡೆದಿದ್ದಾರೆ. ನಾಡಕೋವಿ ಬಳಸಿ ಗುಂಡು ಹಾರಿಸಿರುವುದಗಿ ತಿಳಿದುಬಂದಿದ್ದು, ಬೇಟೆ ತಂಡದವನ್ನು ಕೇಂದ್ರೀಕರಿಸಿ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net