ಕುಸಿದು ಬಿದ್ದು ಮೃತ್ಯು

crime
Published on

ಕಾರ್ಕಳ: ನಂದಳಿಕೆ ಗ್ರಾಮದಲ್ಲಿ ಹೊಟ್ಟೆನೋವು ಎಂದು ಮನೆಯಲ್ಲಿದ್ದ ವ್ಯಕ್ತಿ ಮೂತ್ರ ವಿಸರ್ಜನೆಗೆ ಮನೆಯಿಂದ ಹೊರಗೆ ಹೋದವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಅರ್ಜುನಾ(44) ಮೃತ ವ್ಯಕ್ತಿ. ಅವರು ಶುಕ್ರವಾರ ಬೆಳಗ್ಗೆ ಕೆಲಸಕ್ಕೆ ಹೋದವರು ಮದ್ಯಾಹ್ನವೇ ವಾಪಸ್ ಮನೆಗೆ ಬಂದು ಊಟ ಮುಗಿಸಿ ಹೊಟ್ಟೆನೋವು ಎಂದು ಹೇಳಿದ್ದು, ಚಿಕಿತ್ಸೆಗೆ ಹೋಗದೇ ಮನೆಯಲ್ಲಿ ಇದ್ದರು. ರಾತ್ರಿ 11 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆ ಮಧ್ಯಾವಧಿಯಲ್ಲಿ ಮೂತ್ರ ವಿಸರ್ಜನೆಗೆ ಅಥವಾ ಯಾವುದೋ ಅನಾರೋಗ್ಯ ಸಮಸ್ಯೆದಿಂದಲೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಮನೆಯಿಂದ ಹೊರಗೆ ಹೋದವರು ಮನೆಯ ಬಲಭಾಗದ ತೆಂಗಿನ ಮರದ ಬಳಿಯಲ್ಲಿ ತಲೆ ಕೆಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net