

ಉಡುಪಿ: ಸಾಯಿರಾಧಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ ತಂದೆ ಸುಂದರ್ ಕೆ. ಶೆಟ್ಟಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಇಂಡಿಯನ್ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಪಾಲ್ಗೊಂಡರು.
ಕಾಪುವಿನಲ್ಲಿರುವ ರಾಧಾ ಛಾಯಾ ಮನೆಗೆ ಆಗಮಿಸಿದ್ದ ಸೂರ್ಯಕುಮಾರ್, ದಿ.ಸುಂದರ್ ಕೆ. ಶೆಟ್ಟಿ ದಂಪತಿ ಇರುವ ಭಾವಚಿತ್ರಕ್ಕೆ ಪತ್ನಿಯೊಂದಿಗೆ ನಮಿಸಿದರು.
ಸೂರ್ಯಕುಮಾರ್ ಪತ್ನಿ ದೇವೀಶಾ ಶೆಟ್ಟಿ, ಸಾಯಿರಾಧಾ ಗ್ರೂಪ್ನ ಎಂಡಿ ಮನೋಹರ್ ಶೆಟ್ಟಿ ಅವರ ಸಹೋದರಿ ಲತಾ ಶೆಟ್ಟಿಯ ಸುಪುತ್ರಿಯಾಗಿದ್ದಾರೆ. ಪತ್ನಿಯ ಅಜ್ಜನ ಪುಣ್ಯತಿಥಿಯಲ್ಲಿ ಪಾಲ್ಗೊಂಡು, ಸಂಬಂಧಿಕರೊಂದಿಗೆ ಕೆಲ ಸಮಯ ಕಳೆದರು.
ಈ ಸಂದರ್ಭದಲ್ಲಿ ಮನೋಹರ್ ಶೆಟ್ಟಿ ಪತ್ನಿ ಅನುರಾಧಾ ಶೆಟ್ಟಿ, ಪುತ್ರರಾದ ಸಿದ್ಧಾರ್ಥ ಶೆಟ್ಟಿ, ಶರಣಂ ಶೆಟ್ಟಿ ಹಾಗೂ ರವಿ ಶೆಟ್ಟಿ, ಉದಯ ಶೆಟ್ಟಿ, ಜಯರಾಂ ಶೆಟ್ಟಿ ಇತರರಿದ್ದರು.
ನಿನ್ನೆ ನನ್ನ ತಂದೆಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸೂರ್ಯಕುಮಾರ್ ಯಾದವ್ ದಂಪತಿ ಪಾಲ್ಗೊಂಡಿದ್ದರು. ಬಳಿಕ ಅವರು ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸಮಾರಿಗುಡಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅವರ ಪತ್ನಿ ದೇವೀಶಾ ಶೆಟ್ಟಿ 21 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಶಿಲಾಕಂಬವನ್ನು ದೇವಿಗೆ ಅರ್ಪಣೆ ಮಾಡಿದರು. ಮನೋಹರ್ ಎಸ್. ಶೆಟ್ಟಿ.ಎಂಡಿ, ಸಾಯಿರಾಧಾ ಗ್ರೂಪ್, ಉಡುಪಿ