

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಧಾರವಾಡ ವಲಯ 16 ವಯೋಮಿತಿಯ ತಂಡ ರಚನೆಗೆ ರಾಜನಗರ ಕ್ರಿಕೆಟ್ ಮೈದಾನದಲ್ಲಿ ಆ. 16ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ.
2007ರ ಸೆಪ್ಟೆಂಬರ್ 1ರಿಂದ 2009ರ ಆಗಸ್ಟ್ 31ರ ನಡುವೆ ಜನಿಸಿದವರು ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಬಹುದು. ಬೆಳಗ್ಗೆ 8 ಗಂಟೆಯೊಳಗೆ ಮೈದಾನದಲ್ಲಿ ಕ್ರಿಕೆಟ್ ಸಮವಸ್ತ್ರದಲ್ಲಿ ಹಾಜರಿರಬೇಕು. 14 ವಯೋಮಿತಿಯ ಆಟಗಾರರು ಭಾಗವಹಿಸಲು ಅವಕಾಶ ಇರುವುದಿಲ್ಲ. ವಯಸ್ಸು ಮತ್ತು ವಿಳಾಸವನ್ನು ದೃಢೀಕರಿಸುವ ಜನನ ಪ್ರಮಾಣಪತ್ರ, ಪಾಸ್ಪೋರ್ಟ್ ಅಥವಾ ಆಧಾರ್ ಕಾರ್ಡ್ನ್ನು ಹಾಜರುಪಡಿಸಬೇಕು ಝೆರಾಕ್ಸ್ ಪ್ರತಿಯನ್ನು ಪರಿಗಣಿಸುವುದಿಲ್ಲ ಎಂದು ಧಾರವಾಡ ವಲಯ ಸಂಚಾಲಕ ನಿಖಿಲ ಭೂಸದ ತಿಳಿಸಿದ್ದಾರೆ.